ಮಡಿಕೇರಿ: ವೀರಾಜಪೇಟೆಯ ಬೊಪ್ಪನ ಗೋಪಾಲ ಮತ್ತು ಹರಿಣಿ ದಂಪತಿಯ ಪುತ್ರ ಚಿರಾಯು (ರವಿ ಕುಮಾರ್) ಇವರ ವಿವಾಹವು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಲಿಂಗಪುರದ ನಿರ್ವಾಣಿ ಪರಮೇಶ್ವರ ಮತ್ತು ಸುಶೀಲ ದಂಪತಿಯ ಪುತ್ರಿ ಯಶೀಕ (ಭವ್ಯ) ಅವರೊಡನೆ ಸರಳವಾಗಿ ನಡೆಯಿತು.
ವಧುವಿನ ಸ್ವಗೃಹದಲ್ಲಿ ಕೊರೊನಾ ಲಾಕ್‍ಡೌನ್‍ನ ನಿಯಮದಂತೆ ಸರ್ಕಾರದ ಕಾನೂನುಗಳನ್ನು ಪಾಲಿಸುವ ಮೂಲಕ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.ಭಾಗಮಂಡಲ: ಭಾಗಮಂಡಲದ ಬಾರಿಕೆ ದೇವಯ್ಯ ಮತ್ತು ಪಾರ್ವತಿ ದಂಪತಿಗಳ ಪುತ್ರ ಭಾನುಪ್ರಕಾಶ್ ಇವರ ವಿವಾಹವು ಕುದುಕುಳಿ ಚಿನ್ನಯ್ಯ ಮತ್ತು ಚಂದ್ರಕಲಾ ದಂಪತಿಯ ಪುತ್ರಿ ವದುನ ಅವರೊಡನೆ ಸರಳವಾಗಿ ನಡೆಯಿತು.
ತಾವೂರು ಗ್ರಾಮದಲ್ಲಿ ಕಡಿಮೆ ಸಂಖ್ಯೆಯ ಆಮಂತ್ರಿತರ ನಡುವೆ ವಿವಾಹ ಸಮಾರಂಭ ನೆರವೇರಿತು. ಲಾಕ್‍ಡೌನ್ ನಿರ್ಬಂಧಗಳ ನಡುವೆ ಹಿರಿಯರ ಆಶೀರ್ವಾದದೊಂದಿಗೆ ವಧು-ವರರು ಹಸೆಮಣೆ ಏರಿದರು. ಶನಿವಾರಸಂತೆ: ಶನಿವಾರಸಂತೆ ಸಮೀಪ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದಲ್ಲಿ ಕೊರೊನಾ ಲಾಕ್‍ಡೌನ್ ಹಿನ್ನೆಲೆ ಮಠಾಧೀಶ ಸದಾಶಿವ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಪುರೋಹಿತ ಶಂಕರಯ್ಯ ಹೀರೇಮಠ ಅವರ ಪೌರೋಹಿತ್ಯದಲ್ಲಿ ನಿಂಗಪ್ಪ - ಲಿಂಗೋಪಿ ದಂಪತಿಯ ಪುತ್ರ ಶಶಿ ಮತ್ತು ಹಾಸನ ಜಿಲ್ಲೆಯ ಮನುಗನಹಳ್ಳಿ ಗ್ರಾಮದ ಪಲ್ಲವಿ ಅವರ ಸರಳ ವಿವಾಹ ನೆರವೇರಿತು.