ಮಡಿಕೇರಿ, ಮೇ 25: ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ್ದಾರೆ.

ಇಬ್ನಿವಳವಾಡಿ ಗ್ರಾಮದ ಎಂ.ಪಿ. ಶಶಿಧರ್ ಎಂಬವರ ಮನೆಯ ಲಾಕರ್ ಒಡೆದು ಲಾಕರ್‍ನಲ್ಲಿದ್ದ 9 ಗ್ರಾಂ. ನ ಒಂದು ಚಿನ್ನದ ಸರ, 4 ಗ್ರಾಂ.ನ ಒಂದು ಚಿನ್ನದ ಸರ ಹಾಗೂ ಪೆಂಡೆಂಟ್, ಮೂರು ಚಿಕ್ಕ ಚಿನ್ನದ ಉಂಗುರ ಹಾಗೂ ಒಂದು ದೊಡ್ಡ ಉಂಗುರ ಒಟ್ಟು 4 ಗ್ರಾಂ., 4 ಗ್ರಾಂ.ನ ಒಂದು ಜೊತೆ ಚಿನ್ನದ ಓಲೆ ಹಾಗೂ ಹ್ಯಾಂಗಿಂಗ್ಸ್ ಸೇರಿದಂತೆ ಚಿನ್ನಾಭರಣಗಳು ಕಳ್ಳತನವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯಾದ ಅದೇ ಗ್ರಾಮದ ಮೋನಿಶ್, ಎಂಬಾತನನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಪಿ. ದಿನೇಶ್‍ಕುಮಾರ್ ಮಾರ್ಗ ದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತದ ನಿರೀಕ್ಷಕ ಸಿ.ಎನ್. ದಿವಾಕರ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಹೆಚ್.ವಿ. ಚಂದ್ರಶೇಖರ್, ಸಿಬ್ಬಂದಿಗಳಾದ ತೀರ್ಥಕುಮಾರ್, ಪ್ರೇಮ್‍ಕುಮಾರ್, ಶಿವರಾಜೇಗೌಡ, ಕಲ್ಲಪ್ಪ ಹಿಟ್ನಾಳ್ ಮತ್ತು ಚಾಲಕರಾದ ಪ್ರವೀಣ್ ಕುಮಾರ್, ನಾಗರಾಜು ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.