ಶನಿವಾರಸಂತೆ, ಮೇ 25: ಸಮೀಪದ ಕೊಡ್ಲಿಪೇಟೆಯಲ್ಲಿ ಟಿಪ್ಪು ಯುವಕ ಸಂಘದ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ 150 ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.
ಸಂಘದ ಅಧ್ಯಕ್ಷ ಔರಂಗ್ಜೇಬ್, ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್ ಹಾಗೂ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೈನ್ ಮಾತನಾಡಿದರು. ಮಸೀದಿಯ ಧರ್ಮಗುರು ಪ್ರಾರ್ಥನೆ ಮಾಡಿದರು, ಪದಾಧಿಕಾರಿಗಳು, ಮಸೀದಿಯ ಹಿರಿಯ ಸದಸ್ಯರು ಹಾಜರಿದ್ದರು.