ಮಡಿಕೇರಿ, ಮೇ 22: ಕೊಡಗು ಜಿಲ್ಲೆಯಲ್ಲಿ 5 ಹೆಚ್‍ಪಿ ಗ್ಯಾಸ್ ವಿತರಕರದ್ದು, ಹೆಚ್‍ಪಿ ಗ್ಯಾಸ್ ಏಜೆನ್ಸಿಗಳಿಂದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಸಂಪರ್ಕ ಪಡೆದಿರುವ ಫಲಾನುಭವಿಗಳಿಗೆ ಕೊರೊನಾ ಮಹಾಮಾರಿಯ ಲಾಕ್‍ಡೌನ್‍ನಿಂದ ಮೂರು ತಿಂಗಳ ಉಚಿತ ಗ್ಯಾಸ್ ರೀಫಿಲ್ ನೀಡಲು ಯೋಜನೆ ರೂಪಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಲು ಮಡಿಕೇರಿಯ ದೇವಿ ಗ್ಯಾಸ್ ಏಜೆನ್ಸಿ, ಸೋಮವಾರಪೇಟೆಯ ಗಜಾನನ ಗ್ಯಾಸ್ ಸರ್ವಿಸ್, ವೀರಾಜಪೇಟೆಯ ರವಿರಾಜ್ ಗ್ಯಾಸ್ ಏಜೆನ್ಸಿ, ನಾಪೋಕ್ಲುವಿನ ಶ್ರೀ ರಾಜರಾಜೇಶ್ವರಿ ಗ್ಯಾಸ್ ಏಜೆನ್ಸಿ, ಐಗೂರಿನ ಶ್ರೀ ಪಾರ್ವತಿ ಗ್ಯಾಸ್ ಏಜೆನ್ಸಿ, 4 ಶಾಂತಳ್ಳಿಯ ಗ್ಯಾಸ್ ಏಜೆನ್ಸಿಯವರು ಮನವಿ ಮಾಡಿಕೊಂಡಿದ್ದಾರೆ.
ಈಗಾಗಲೇ ಹಲವಾರು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಏಪ್ರಿಲ್ ತಿಂಗಳ ಉಚಿತ ಗ್ಯಾಸ್ ರೀಫಿಲ್ ಪಡೆದಿದ್ದು, ಇನ್ನೂ ಅನೇಕ ಗ್ರಾಹಕರು ಉಚಿತ ಗ್ಯಾಸ್ ರೀಫಿಲ್ ಪಡೆಯದೆ ಬಾಕಿ ಉಳಿದಿರುತ್ತಾರೆ. ಈ ಯೋಜನೆಯ ಫಲಾನುಭವಿಗಳು ಏಪ್ರಿಲ್ ತಿಂಗಳ ಉಚಿತ ರೀಫಿಲ್ ತೆಗೆದುಕೊಂಡರೆ ಮಾತ್ರ ಮೇ ತಿಂಗಳ ಗ್ಯಾಸ್ ರೀಫಿಲ್ ಹಣ ತಮ್ಮ ಬ್ಯಾಂಕಿಗೆ ಸಂದಾಯವಾಗಲಿದೆ. ಮೇ ತಿಂಗಳ ಉಚಿತ ಗ್ಯಾಸ್ ಪಡೆದರೆ ಮಾತ್ರ ಜೂನ್ ತಿಂಗಳ ಉಚಿತ ಗ್ಯಾಸ್ ಸಂಪರ್ಕ ಪಡೆದಿರುವವರು ನೀಡಿರುವ ಮೊಬೈಲ್ ಸಂಖ್ಯೆ ಮತ್ತು ಸಂಪರ್ಕಕ್ಕೆ ಸಿಗದೆ ಇರುವದು, ಆಯಾ ವಿಳಾಸದಲ್ಲಿ ಪ್ರಸ್ತುತ ವಾಸವಿಲ್ಲದೇ ಇರುವದರಿಂದ ಎಲ್ಲರನ್ನು ಸಂಪರ್ಕಿಸಿ ಉಚಿತ ಗ್ಯಾಸ್ ನೀಡಲು ಸಾಧ್ಯವಾಗುತ್ತಿಲ್ಲ. ಫಲಾನುಭವಿಗಳು ಉಜ್ವಲ ಉಚಿತ ಗ್ಯಾಸ್ ಸಂಪರ್ಕ ಪಡೆದಿರುವ ಆಯಾ ಗ್ಯಾಸ್ ಏಜೆನ್ಸಿಗಳಲ್ಲಿ ಸಂಪರ್ಕಿಸಿ, ಚಾಲ್ತಿಯಲ್ಲಿರುವ ಫೋನ್ ನಂ, ವಿಳಾಸ ನೀಡಿ ಉಚಿತ ಗ್ಯಾಸ್ ರೀಫಿಲ್ ಪಡೆಯಲು ಸಂಸ್ಥೆಗಳು ಕೋರಿವೆ.