ಮಡಿಕೇರಿ, ಮೇ 22: ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹಾರಂಗಿ ಮತ್ತು ಲಕ್ಷ್ಮಣತೀರ್ಥ ಆಣೆಕಟ್ಟೆಯಿಂದ ಜನತೆಗೆ ತೊಂದರೆಯಾಗುತ್ತಿದ್ದು, ಈ ಆಣೆಕಟ್ಟೆಗಳನ್ನು ಸರಕಾರ ತೆರವುಗೊಳಿಸಬೇಕೆಂದು ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸಂಬಂಧಿಸಿದ ಆಣೆಕಟ್ಟೆಗಳು ಅವೈಜ್ಞಾನಿಕವಾಗಿದ್ದು, ಪರಿಣಾಮವಾಗಿ ಜಿಲ್ಲೆಯ ಜನತೆ ಜಲಸ್ಫೋಟ ಹಾಗೂ ಭೂಕುಸಿತದಂತಹ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ ಎಂದು ಟೀಕಿಸಿದ್ದಾರೆ.