ಮಡಿಕೇರಿ, ಮೇ 21: 2018-19ನೇ ಸಾಲಿನಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಗುಡ್ಡಕುಸಿತಕ್ಕೆ ಮನೆ, ಮಠ ಕಳೆದುಕೊಂಡಿರುವ ಸಂತ್ರಸ್ತರಿಗೆ ಕಟ್ಟಲ್ಪಟ್ಟು, ಇದೀಗ ಅಂತಿಮ ಹಂತದಲ್ಲಿರುವ ಮನೆಗಳ ನಿರ್ಮಾಣ ಕಾಮಗಾರಿ ಕಳಪೆ ಆಗಿರುತ್ತದೆ.

2 ವರ್ಷಗಳ ಕಾಲಾವಕಾಶದಲ್ಲಿ, 9.58 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಮನೆಗಳ ಬುಡವೆಲ್ಲ ಕೆಟ್ಟುಹೋಗಿವೆ. ಇದನ್ನು ಮುಚ್ಚಿಡಲು ಗೋಣಿಚೀಲ ಹಾಕಲಾಗಿದೆ. ಮನೆಯ ಸುತ್ತ ಕಾಂಪೌಂಡ್ ಗೋಡೆಗೆ ಸಿಮೆಂಟಿನ ಬದಲು ಮಣ್ಣನ್ನು ಮಿಶ್ರಮಾಡಿ ಅದನ್ನು ಮರೆಮಾಚಲು ಅಚ್ಚುಕಟ್ಟಾಗಿ ಮೇಲ್ಪದರಕ್ಕೆ ಕಾಟಚಾರಕ್ಕೆ ಸಾರಣೆ ಮಾಡಿ ಸುಣ್ಣ ಬಳಿಯಲಾಗಿದೆ.

ಮನೆಗೆ ನಿರ್ಮಿಸಿರುವ ತಡೆಗೋಡೆಗಳ ಸ್ಥಿತಿ ಶೋಚನೀಯವಾಗಿದೆ. ಈ ವಷರ್À ಸುರಿದ ಮೊದಲ ಮಳೆಗೇ ಅದು ಬಾಯಿ ಬಿಟ್ಟು, ನೋಡಲು ಕರುಣಾಜನಕವಾಗಿದೆ. ಈ ವಷರ್Àದ ಮಳೆಗೆ ನಿಂತಲ್ಲೇ ನಿಲ್ಲುತ್ತದೆಯೇ ಎನ್ನುವ ಸಂಶಯ ಮೂಡಿಬಂದಿದೆ.

ಇಂದು ಉಪವಿಭಾಗಾಧಿಕಾರಿ ಜವರೇಗೌಡ ಹಾಗೂ ರಾಜೀವ್ ಗಾಂಧಿ ವಸತಿ ಯೋಜನೆಯ ಅಧಿಕಾರಿಗಳು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಾರ್ವಜನಿಕರೊಡನೆ ಚರ್ಚಿಸಿ, ಅವರ ಅಹವಾಲುಗಳನ್ನು ಸ್ವೀಕರಿಸಿದ್ದಲ್ಲದೆ , ಶೀಘ್ರವಾಗಿ ಕಾಮಗಾರಿಯಲ್ಲಿನ ಲೋಪದೋಷÀಗಳನ್ನು ಸರಿಪಡಿಸುವಂತೆ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕವಾಗಿ ದೂರುಗಳನ್ನು ಸ್ವೀಕರಿಸುವ ಸಲುವಾಗಿ ದೂರು ಪೆಟ್ಟಿಗೆಯನ್ನು ಸ್ಥಾಪಿಸಬೇಕೆಂಬ ಆದೇಶ ನೀಡಿದ್ದಾರೆ.

ತಾ. 29 ರಂದು ಸಂತ್ರಸ್ತರಿಗೆ ಈ ಮನೆಗಳನ್ನು ಹಸ್ತಾಂತರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಜಿಲ್ಲೆಗೆ ಆಗಮಿಸಲಿದ್ದಾರೆ. ಕಳಪೆಯಾಗಿರುವ ಈ ಮನೆಗಳನ್ನು ಮುಖ್ಯಮಂತ್ರಿಗಳ ಆಗಮನದ ಒಳಗೆ ಸರಿ ಮಾಡಲಾಗುತ್ತದೆಯೇ ಕಾದು ನೋಡಬೇಕು.