ನಾಪೋಕ್ಲು, ಮೇ 21: ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಗೇರಿ ಗ್ರಾಮದಲ್ಲಿ ನಿರಾಶ್ರಿತರಿಗೆ 4.60 ಕೋಟಿ ರೂ. ವೆಚ್ಚದ ಮನೆ ನಿರ್ಮಾಣ ಕಾಮಗಾರಿ ಆಗುತ್ತಿದ್ದು, ನಿರ್ಮಿತಿ ಕೇಂದ್ರದಿಂದ 22 ಮನೆಗಳು ಹಾಗೂ 2.60 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿ ನಡೆಯುತ್ತಲಿದ್ದು, ಇದರ ಕಾಮಗಾರಿ ಹಾಗೂ ನಿರ್ಮಿತ ಮನೆಗಳನ್ನು ಶಾಸಕ ಕೆ.ಜಿ. ಬೋಪಯ್ಯ, ಇಂದು ವೀಕ್ಷಿಸಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಕುಮುದ ರಶ್ಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಕೆ. ಜಯಂತಿ, ಉಪಾಧ್ಯಕ್ಷ ಕೆ.ಎಸ್. ಭೀಮಯ್ಯ, ವಿಎಸ್‍ಎಸ್‍ಎನ್ ನಿರ್ದೇಶಕ ತಿಮ್ಮಯ್ಯ ಹಾಗೂ ಕಾಂತಾ ಕಾವೇರಪ್ಪ ಇದ್ದರು. ಈ ಮನೆಗಳನ್ನು 2020ರ ಜೂನ್ ಅಂತ್ಯದೊಳಗೆ ನಿರಾಶ್ರಿತರಿಗೆ ಹಸ್ತಾಂತರಿಸಲಾಗುವುದು ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ.