ಚೆಟ್ಟಳ್ಳಿ, ಮೇ 21: ಪವಿತ್ರ ರಂಜಾನ್ ಹಬ್ಬವು ಶಾಫಿ ಬಾಂಧವರಿಗೆ ಚಂದ್ರದರ್ಶನವಾದರೆ ಶನಿವಾರ ಇಲ್ಲದಿದ್ದರೆ ಭಾನುವಾರ ಹಾಗೂ ಹನಫಿ ಬಾಂಧವರಿಗೆ ಭಾನುವಾರ ಅಥವಾ ಸೋಮವಾರ ಹಬ್ಬ ಆಗುವ ಸಾಧ್ಯತೆ ಇದೆ. ಮಸೀದಿಗಳಲ್ಲಿ ಹಾಗೂ ಈದ್ಗಾಗಳಲ್ಲಿ ನಮಾಜಿಗೆ ಅನುಮತಿ ಇಲ್ಲದ ಕಾರಣ ಸರಕಾರದ ಆದೇಶದ ಪ್ರಕಾರ ಮನೆಯಲ್ಲಿ ಈದ್ ನಮಾಜ್ ಅನ್ನು ನಿರ್ವಹಿಸುವುದರೊಂದಿಗೆ ಪ್ರಸಕ್ತ ಸನ್ನಿವೇಶದಲ್ಲಿನ ಜನರಿಗೆ ಬಂದೆರಗಿದ ಮಹಾಮಾರಿ ಕೊರೊನಾ ಪಿಡುಗಿನಿಂದ ಮುಕ್ತಿ ಹೊಂದಲು ಎಲ್ಲರೂ ಪ್ರತ್ಯೇಕವಾಗಿ ಪ್ರಾರ್ಥಿಸುವಂತೆ ಸಮಸ್ತ ಜಿಲ್ಲಾ ಉಸ್ತುವಾರಿ ಖಾಜಿ ಹಾಗೂ ಕೇಂದ್ರ ಮುಶಾವರ ಸದಸ್ಯ ಶೈಖುನಾ ಎಂ.ಎಂ. ಅಬ್ದುಲ್ಲ ಫೈಝಿ ಉಸ್ತಾದ್ ಕರೆ ನೀಡಿದ್ದಾರೆ.
ಈ ಪುಣ್ಯ ದಿನದಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಿ ಕಷ್ಟದಲ್ಲಿರುವ ಜನರಿಗೆ ತಲುಪುವ ರೀತಿಯಲ್ಲಿ ಫಿತ್ರ್ ಝಕಾತನ್ನು ತಲುಪಿಸಬೇಕಾಗಿಯೂ, ಮೊದಲಿನ ತರ ಜನರು ಭಯಮುಕ್ತರಾಗಿ ಪ್ರೀತಿ ವಿಶ್ವಾಸದಿಂದ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ಏರ್ಪಡುವಂತೆ ಎಲ್ಲರೂ ಪ್ರತ್ಯೇಕವಾಗಿ ಪ್ರಾರ್ಥನೆಯನ್ನು ಮಾಡುವಂತೆ ಕೋರಿದ್ದಾರೆ.