ವೀರಾಜಪೇಟೆ, ಮೇ 21: ಡೆಲ್ಲಿಯ ನಿಜಾಮುದ್ದೀನ್ ನಂಟಿನಿಂದ 30 ದಿನಗಳ ಹಿಂದೆಯೇ ಕೊಡಗಿಗೆ ಬಂದು ಮಡಿಕೇರಿ ಆಸ್ಪತ್ರೆ ಹಾಗೂ ಕ್ವಾರಂಟೈನ್ನಲ್ಲಿದ್ದ 15 ಮಂದಿ ತಬ್ಲಿಘಿಯರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಮತ್ತೆ ಇಲ್ಲಿ ಇಂದು ಕ್ವಾರಂಟೈನ್ ಮಾಡಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್ ತಿಳಿಸಿದ್ದಾರೆ.
ಈಗಾಗಲೇ ಈ 15 ಮಂದಿ ಮಡಿಕೇರಿಯಲ್ಲಿ ಕ್ವಾರಂಟೈನ್ ನಲ್ಲಿದ್ದರೂ ಕೊರೊನಾ ಸೋಂಕು ಶಂಕೆಯ ಆಧಾರದ ಮೇಲೆ ಜಿಲ್ಲಾಧಿಕಾರಿ ಆದೇಶದಂತೆ ವೀರಾಜಪೇಟೆಯಲ್ಲಿಯೂ ಕ್ವಾರಂಟೈನ್ ಮುಂದುವರೆಸಲಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಸಾಂಸ್ಥಿಕ, ಹೋಮ್ ಕ್ವಾರಂಟೈನ್ ಸೇರಿದಂತೆ ಒಟ್ಟು 102 ಮಂದಿ ಕ್ವಾರಂಟೈನ್ನಲ್ಲಿದ್ದಾರೆ. ತಬ್ಲಿಘಿಯ 15 ಮಂದಿ ಸೇರಿದರೆ ಕ್ವಾರಂಟೈನ್ ಸಂಖ್ಯೆ 117ಕ್ಕೆ ಏರಲಿದೆ. ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಲಾಗಿದೆ. ಇವರುಗಳ ಮೇಲೆ ಕಂದಾಯ ಇಲಾಖೆ ವಿಶೇಷ ನಿಗಾ ಇರಿಸಿದೆ ಎಂದು ನಂದೀಶ್ ತಿಳಿಸಿದರು.