ನಾಪೆÇೀಕ್ಲು, ಮೇ 20: ಸುಮಾರು 10 ವರ್ಷಗಳಿಂದ ನೂತನ ಬಸ್ ನಿಲ್ದಾಣ ನಿರ್ಮಾಣ ಆಗುತ್ತದೆ ಎಂದು ಕಾದು ಕುಳಿತ ನಾಪೆÇೀಕ್ಲು ಪೆÇಲೀಸರು ಅನ್ಯ ಮಾರ್ಗವಿಲ್ಲದೆ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಎದುರು ಭಾಗದ ರಸ್ತೆಯನ್ನೇ ಬಸ್ ನಿಲ್ದಾಣವನ್ನಾಗಿಸಿದ್ದಾರೆ.

2011ರಲ್ಲಿ ಆಗಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಶಾಂತೆಯಂಡ ರವಿ ಕುಶಾಲಪ್ಪ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬಸ್ ನಿಲ್ದಾಣಕ್ಕೆ ಮಾರುಕಟ್ಟೆ ಬಳಿ ಜಾಗ ಮಂಜೂರು ಮಾಡಿರುವದಾಗಿ ಘೋಷಿಸಿದ್ದರು. ನಂತರದ ದಿನಗಳಲ್ಲಿ ಅಲ್ಲಿ ಕಾಮಗಾರಿಗೆ ಭೂಮಿ ಪೂಜೆಯನ್ನೂ ನಡೆಸಲಾಗಿತ್ತು. ಆದರೆ ಅದು ಇಂದಿನವರೆಗೂ ಯಾವದೇ ಪ್ರಗತಿಯನ್ನು ಕಾಣಲಿಲ್ಲ. ನಾಪೆÇೀಕ್ಲು ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಅನಿರೀಕ್ಷಿತ ಮಟ್ಟದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಇದನ್ನು ನಿಭಾಯಿಸಲು ಪೆÇಲೀಸರು ಹರಸಾಹಸ ಪಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಇದನ್ನು ಸಮರ್ಪಕವಾಗಿ ಕಡಿಮೆಗೊಳಿಸುವ ನಿಟ್ಟಿನಲ್ಲಿ ನಾಪೆÇೀಕ್ಲು ಠಾಣೆಯಲ್ಲಿ ನೂತನವಾಗಿ ಠಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಆರ್. ಕಿರಣ್ ಸಿಬ್ಬಂದಿಗಳ ಜೊತೆಗೂಡಿ ಪಟ್ಟಣದಲ್ಲಿ ಬಸ್ಸು ನಿಲುಗಡೆಗೆ, ದ್ವಿಚಕ್ರ ನಿಲುಗಡೆಗೆ, ಆಟೋ ರಿಕ್ಷಾ ನಿಲುಗಡೆಗೆ ಸೇರಿದಂತೆ ನಿಲುಗಡೆ, ನಿಲುಗಡೆ ನಿಷೇಧದ ನಾಮಫಲಕಗಳನ್ನು ಅಳವಡಿಸುವತ್ತ ಕಾರ್ಯಪ್ರವೃತ್ತರಾಗಿದ್ದಾರೆ.

ಈ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ ನಾಪೆÇೀಕ್ಲು ಠಾಣಾಧಿಕಾರಿ ಆರ್. ಕಿರಣ್, ನಾಪೆÇೀಕ್ಲು ಪಟ್ಟಣದ ರಸ್ತೆ ಕಿರಿದಾದ ಕಾರಣ ಹೆಚ್ಚಿನ ಟ್ರಾಫಿಕ್