ಪೆರಾಜೆ, ಮೇ 19: ಕುಂಬಳಚೇರಿ- ಬಂಗಾರ ಕೋಡಿ ರಸ್ತೆಯ ಬಂಡ ಶಾಲೆಯ ಪಕ್ಕ ಸೇತುವೆ ಕಾಮಗಾರಿ ನಡೆ ಯುತ್ತಿದ್ದು ಈ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳಿಗೆ ಮತ್ತು ಪಾದಚಾರಿಗಳು ಸಂಚರಿಸುವ ಸಲುವಾಗಿ ಮಾಡಿದ ದಾರಿ ಮಳೆಯಲ್ಲಿ ಕೊಚ್ಚಿ ಹೋಗಿರುತ್ತದೆ. ಇದೀಗ ಪುತ್ಯಪೆರಾಜೆ ವ್ಯಾಪ್ತಿಯಿಂದ ಪೆರಾಜೆ ಹಾಗೂ ಇತರ ಸ್ಥಳಕ್ಕೆ ಹೋಗುವವರು ಕೋಡಿ- ಅಮೆಚೂರ್ ಮಾರ್ಗದಲ್ಲಿ ಸಂಚರಿಸುವ ಪ್ರಮೇಯ ಎದುರಾಗಿದೆ.