ಪೆರಾಜೆ, ಮೇ 19: ಪರಿಸರ ದಿನದಂದು ಮಾತ್ರವೇ ಸಸಿಗಳನ್ನು ನೆಟ್ಟರೆ ಸಾಲದು. ಸಸಿಗಳ ಮೇಲಿನ ಕಾಳಜಿ ಮತ್ತು ಪೆÇೀಷಣೆ ಅಭಿಯಾನದ ಸ್ವರೂಪ ಪಡೆಯಬೇಕು ಇದಕ್ಕೆ ಪೂರಕವಾಗುವಂತೆ ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆಯಾಗುತ್ತಿದ್ದು, ವಾತಾವರಣ ಕೊಂಚ ತಂಪಾಗಿದೆ ಈ ದಿನಗಳಲ್ಲಿ ಮಡಿಕೇರಿ ವಿಭಾಗ ಸಂಪಾಜೆ ವಲಯ ಕೊಯನಾಡು ಸಸ್ಯಕ್ಷೇತ್ರದಲ್ಲಿ ಸಾರ್ವಜನಿಕರಿಗೆ ವಿವಿಧ ಬಗೆಯ ಸಸಿಗಳನ್ನು ಕಡಿಮೆ ದರದಲ್ಲಿ ವಿತರಿಸಿ ಆಸಕ್ತರಿಗೆ ತಮಗೆ ಲಭ್ಯವಿರುವ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವಂತೆ ಪೆÇ್ರೀತ್ಸಾಹಿಸುವ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ವರ್ಷ: 74,500 ಗಿಡಗಳಲ್ಲಿ ಶ್ರೀಗಂಧ, ರಕ್ತಚಂದನ, ಸಾಗುವಾನಿ, ಕಹಿಬೇವು, ನಿಂಬೂ, ನೆರಳೆ, ಕಾಡು ಬಾದಾಮಿ, ಮಹಾಗನಿ, ಸಿಲ್ವರ್ ಗಿಡಗಳಿವೆ. ಸಸಿ ಪಡೆಯುವ ಸಾರ್ವಜನಿಕರು ತಮ್ಮ ಜಾಗದ ಆರ್.ಟಿ.ಸಿ. (ಪಹಣಿ ಪತ್ರ) ನೀಡಿ ಸಸಿಗಳನ್ನು ಪಡೆಯಬಹುದಾಗಿದೆ

ಹೆಚ್ಚಿನ ಮಾಹಿತಿಗಾಗಿ ಮಧುಸೂದನ್ ವಲಯ ಅರಣ್ಯಾಧಿಕಾರಿ ಸಂಪಾಜೆ ವಲಯ - 9481160468, 9480653338, 9481334080 ಇವರನ್ನು ಸಂಪರ್ಕಿಸ ಬಹುದಾಗಿದೆ ಇಲಾಖೆ ಪ್ರಕಟಣೆ ತಿಳಿಸಿದೆ.