ಶನಿವಾರಸಂತೆ, ಮೇ 19 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಶನಿವಾರಸಂತೆಯ ಬಿ ಒಕ್ಕೂಟದ ವತಿಯಿಂದ ಪಟ್ಟಣದ ಕರೇಗೌಡ-ಗಿಡ್ಡಮ್ಮ ದಂಪತಿಯ ಪುತ್ರಿ ವಿಶೇಷಚೇತನ ಅವಿವಾಹಿತ ಮಹಿಳೆ ಪಾರ್ವತಿ (61) ಅವರಿಗೆ ಗಾಲಿ ಕುರ್ಚಿ ವಿತರಿಸಲಾಯಿತು.

ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್, ವಲಯ ಮೇಲ್ವಿಚಾರಕ ರಮೇಶ್, ಸೇವಾ ಪ್ರತಿನಿಧಿ ಶೋಭಾವತಿ, ದುಂಡಳ್ಳಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೇಣುಗೋಪಾಲ್, ಒಕ್ಕೂಟದ ಜಂಟಿ ಕಾರ್ಯದರ್ಶಿ ಎಸ್.ಪಿ. ದಿವ್ಯಾ, ಮಾಜಿ ಅಧ್ಯಕ್ಷೆ ಮೀನಾಕ್ಷಿ ಹಾಜರಿದ್ದರು.