ಸಿದ್ದಾಪುರ, ಮೇ 19: ಸಿದ್ದಾಪುರ ಸಮೀಪದ ಖಾಸಗಿ ತೋಟದ ಕಾರ್ಮಿಕ ಯುವತಿಯ ಮೇಲೆ ನೆಲ್ಯಹುದಿಕೇರಿಯ ಯುವಕನೋರ್ವ ಅತ್ಯಾಚಾರ ಮಾಡಿ, ಗರ್ಭವತಿಯನ್ನಾಗಿಸಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿ ಪ್ರವೀಣ್ ವಿರುದ್ಧ ಮಡಿಕೇರಿಯ ಮಹಿಳಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ವಿಭಾಗದ ಡಿ.ವೈ.ಎಸ್ಪಿ. ಬಾರಿಕೆ ದಿನೇಶ್ ಕುಮಾರ್ ಹಾಗೂ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಯುವತಿಯ ಮನೆಗೆ ಭೇಟಿ ನೀಡಿ ಮಹಜರು ನಡೆಸಿದರು. ಯುವಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ಪ್ರವೀಣ್ ಪರಾರಿಯಾಗಿದ್ದಾನೆ.