ಕೂಡಿಗೆ, ಮೇ 17: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಮಳೆ ಬಿದ್ದಿದೆ. ಅರೆ ಮಲೆನಾಡು ಪ್ರದೇಶವಾದ ಕುಶಾಲನಗರ ಹೋಬಳಿ ವ್ಯಾಪ್ತಿಯ ತೊರೆನೂರು ಶಿರಂಗಾಲ, ಹೆಬ್ಬಾಲೆ ಮಳೆ ಅವಲಂಬಿತ ಪ್ರದೇಶಗಳÀಲ್ಲಿ ಕಳೆದ ತಿಂಗಳು ಬಿದ್ದ ಮಳೆಯಲ್ಲಿ ಭೂಮಿಯನ್ನು ಉಳುಮೆ ಮಾಡಿ ಸಿದ್ದ ಮಾಡಿಕೊಂಡಿದ್ದರು. ಇದೀಗ ಕಳೆದ ಎರಡು ದಿನಗಳಿಂದ ಬಿತ್ತನೆಗೆ ಅನುಕೂಲವಾಗುವಂತೆ ಮಳೆ ಬಿದ್ದಿದೆ.
ಕುಶಾಲನಗರ ಹೋಬಳಿ ವ್ಯಾಪ್ತಿಯ ಶಿರಂಗಾಲ, ಹೆಬ್ಬಾಲೆ, ತೂರೆನೂರು, ಅಳುವಾರ, ಸಿದ್ದಲಿಂಗಪುರ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯನ್ನು ಬೆಳೆಯಲು ಸಿದ್ದವಾಗಿ ಇಂದಿನಿಂದ ಜೋಳ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಭೂಮಿಯನ್ನು ಉಳುಮೆ ಮಾಡಿ ರಾಸಾಯನಿಕ, ಸಾವಯವ ಗೊಬ್ಬರವನ್ನು ಹಾಕಿ ನಂತರ ಮಣ್ಣಿನ ಆದ್ಯತೆಯ ಅನುಗುಣವಾಗಿ ಹೈಬ್ರೀಡ್ ಕಂಪೆನಿಯ ಬೀಜಗಳನ್ನು ಬಿತ್ತನೆ ಮಾಡಲಾಗುತ್ತಿದೆ.