ಶನಿವಾರಸಂತೆ, ಮೇ 16: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಡೆಯನಪುರ ಗ್ರಾಮದ ಮುಖ್ಯರಸ್ತೆಯಲ್ಲಿ ಮಂಜೇಶ ಎಂಬಾತ ಚಾಲಿಸುತ್ತಿದ್ದ ಬೈಕ್‍ವೊಂದು (ಕೆಎ-12-ಒ-0566) ಅಬ್ದುಲ್ ಮಜೀದ್ ಎಂಬವರು ಚಾಲಿಸುತ್ತಿದ್ದ ಸ್ವಿಫ್ಟ್ ಕಾರಿಗೆ (ಕೆಎ-51- ಎನ್‍ಎ-7269) ಡಿಕ್ಕಿಯಾದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.