ಕುಶಾಲನಗರ, ಮೇ 16: ಕೊಡಗು ಜಿಲ್ಲೆಯಲ್ಲಿ ಕೊರೊನಾ ತಪಾಸಣಾ ಕೇಂದ್ರದಲ್ಲಿ ಪೊಲೀಸ್ ಇಲಾಖಾ ಸಿಬ್ಬಂದಿಗಳಿಗೆ ಕರ್ತವ್ಯದ ಅವಧಿಯನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಕಡಿಮೆ ಮಾಡಲು ಎಲ್ಲಾ ಠಾಣೆಗಳಿಗೆ ಸೂಚಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಕೋವಿಡ್ ಕೇಂದ್ರಗಳಲ್ಲಿ ಪೊಲೀಸರು ದಿನದ 12 ಗಂಟೆ ಕಾಲ ಕರ್ತವ್ಯ ಮಾಡಬೇಕಿತ್ತು. ಈ ಬಗ್ಗೆ ಶಕ್ತಿಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಸ್ಪಂದಿಸಿದ ಪೊಲೀಸ್ ವರಿಷ್ಠಾಧಿಕಾರಿ ಗಳು ದಿನಕ್ಕೆ ಮೂರು ಪಾಳಿಯಲ್ಲಿ ಅಂದರೆ ತಲಾ 8 ಗಂಟೆಗಳ ಅವಧಿ ಕೆಲಸ ನಿರ್ವಹಿಸಲು ಕ್ರಮಕೈಗೊಳ್ಳುವಂತೆ ವರಿಷ್ಠಾಧಿಕಾರಿ ಡಾ.ಸುಮನ್ ಆದೇಶ ನೀಡಿದ್ದು ಪೊಲೀಸ್ ಸಿಬ್ಬಂದಿಗಳು ಇದರಿಂದ ಸ್ವಲ್ಪ ಮಟ್ಟಿಗೆ ಕೆಲಸದ ಒತ್ತಡದಿಂದ ನಿಟ್ಟುಸಿರು ಬಿಡುವಂತಾಗಿದೆ.