ಸೋಮವಾರಪೇಟೆ, ಮೇ 17: ಹೊಳೆಯಿಂದ ಅಕ್ರಮವಾಗಿ ಮರಳನ್ನು ತೆಗೆದು ಸಾಗಾಟ ಗೊಳಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಪೊಲೀಸರು, ಮರಳು ಸಹಿತ ಪಿಕ್ಅಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣ ಸಮೀಪದ ಕಾಗಡಿಕಟ್ಟೆ ಗ್ರಾಮದ ಸೇತುವೆಯ ಅಡಿಯಲ್ಲಿ ಹರಿಯುವ ಹೊಳೆಯಿಂದ ಅಕ್ರಮವಾಗಿ ಮರಳನ್ನು ತೆಗೆದು ಮೂಟೆಗಳಲ್ಲಿ ತುಂಬಿ ಪಿಕ್ಅಪ್ (ಕೆ.ಎ.18 ಎ. 9835)ನಲ್ಲಿ ಸಾಗಾಟಗೊಳಿಸಲು ಯತ್ನಿಸುತ್ತಿದ್ದ ಸಂದರ್ಭ ಪೊಲೀಸರು ಧಾಳಿ ನಡೆಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿದ್ದ ಈರ್ವರು ಪರಾರಿಯಾಗಿದ್ದು, ಪಿಕ್ಅಪ್ಗೆ ತುಂಬಲಾಗಿದ್ದ ಮರಳು ಸಹಿತ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಶಿವಶಂಕರ್, ಮುಖ್ಯಪೇದೆ ನವೀನ್, ಸಿಬ್ಬಂದಿಗಳಾದ ವಸಂತ್, ಚಾಲಕ ಕುಮಾರ್ ಅವರುಗಳು ಭಾಗವಹಿಸಿದ್ದರು.