ಸೋಮವಾರಪೇಟೆ,ಮೇ 15: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಮೂರು ತಿಂಗಳುಗಳ ಕಾಲ ಸಾಲದ ಕಂತು ಕಟ್ಟಲು ಕೇಂದ್ರ ಸರ್ಕಾರವೇ ವಿನಾಯಿತಿ ನೀಡಿದ್ದರೂ, ಮೈಕ್ರೋ ಫೈನಾನ್ಸ್‍ಗಳ ಏಜೆಂಟರು ಮಾತ್ರ ಸಾಲ ಕಟ್ಟುವಂತೆ ಸದಸ್ಯ ಮಹಿಳೆಯರಿಗೆ ದುಂಬಾಲು ಬೀಳುತ್ತಿದ್ದಾರೆ.

ಈ ಹಿಂದೆ ಬೆಲ್ಟ್ ಸ್ಟಾರ್ ಮೈಕ್ರೋ ಫೈನಾನ್ಸ್‍ನವರು ಶನಿವಾರಸಂತೆ ಸುತ್ತಮುತ್ತಲಲ್ಲಿ ಹಣ ವಸೂಲಾತಿಗೆ ಇಳಿದ ಸಂದರ್ಭ ಸ್ಥಳೀಯರೊಂದಿಗೆ ಶಿವರಾಮೇಗೌಡ ಬಣದ ಕರವೇ ಕಾರ್ಯಕರ್ತರು ತರಾಟೆಗೆ ತೆಗೆದು ಕೊಂಡಿದ್ದರು.

ಅದರ ಮುಂದುವರೆದ ಭಾಗವೆಂಬಂತೆ ಇಂದು ಬೆಳ್ಳಾರಳ್ಳಿ ಗ್ರಾಮದಲ್ಲಿ ಮಹಿಳೆಯರಿಂದ ಸಾಲದ ಕಂತು ವಸೂಲಾತಿ ಮಾಡಲು ಮುಂದಾದ ಎಸ್‍ಕೆಎಸ್ ಫೈನಾನ್ಸ್‍ನ ಏಜೆಂಟರನ್ನು ಸ್ಥಳೀಯರೊಂದಿಗೆ ಕರವೇ ಕಾರ್ಯಕರ್ತರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಅಂತಿಮವಾಗಿ ಸಾಲದ ಹಣ ಕಟ್ಟಿಸಿಕೊಳ್ಳದೇ ಏಜೆಂಟರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಎಸ್‍ಕೆಎಸ್ ಫೈನಾನ್ಸ್‍ನ ಏಜೆಂಟರು ಇಂದು ಬೆಳ್ಳಾರಳ್ಳಿ ಗ್ರಾಮಕ್ಕೆ ಆಗಮಿಸಿ ಸಾಲದ ಕಂತು ಕಟ್ಟುವಂತೆ ಮಹಿಳೆಯರಿಗೆ ಒತ್ತಡ ಹೇರುತ್ತಿದ್ದರು.

ಈ ವ್ಯಾಪ್ತಿಯ ಈರ್ವರು ಮಹಿಳೆಯರಿಗೆ ಫೈನಾನ್ಸ್‍ನಿಂದ ಸಾಲ ನೀಡುವದಾಗಿ ತಿಳಿಸಿದ್ದ ಏಜೆಂಟರು, ಇತರ ಸದಸ್ಯರಿಂದ ಸಾಲದ ಕಂತನ್ನು ವಸೂಲಿ ಮಾಡಲು ಮುಂದಾಗಿದ್ದರು. ಇತರ ಸದಸ್ಯರು ಸಾಲದ ಕಂತು ಕಟ್ಟಿದರೆ ಮಾತ್ರ ಹೊಸ ಸಾಲ ನೀಡಲಾಗುವದು ಎಂದು ಒತ್ತಡ ಮುಂದಾದ ಎಸ್‍ಕೆಎಸ್ ಫೈನಾನ್ಸ್‍ನ ಏಜೆಂಟರನ್ನು ಸ್ಥಳೀಯರೊಂದಿಗೆ ಕರವೇ ಕಾರ್ಯಕರ್ತರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಅಂತಿಮವಾಗಿ ಸಾಲದ ಹಣ ಕಟ್ಟಿಸಿಕೊಳ್ಳದೇ ಏಜೆಂಟರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಎಸ್‍ಕೆಎಸ್ ಫೈನಾನ್ಸ್‍ನ ಏಜೆಂಟರು ಇಂದು ಬೆಳ್ಳಾರಳ್ಳಿ ಗ್ರಾಮಕ್ಕೆ ಆಗಮಿಸಿ ಸಾಲದ ಕಂತು ಕಟ್ಟುವಂತೆ ಮಹಿಳೆಯರಿಗೆ ಒತ್ತಡ ಹೇರುತ್ತಿದ್ದರು.

ಈ ವ್ಯಾಪ್ತಿಯ ಈರ್ವರು ಮಹಿಳೆಯರಿಗೆ ಫೈನಾನ್ಸ್‍ನಿಂದ ಸಾಲ ನೀಡುವದಾಗಿ ತಿಳಿಸಿದ್ದ ಏಜೆಂಟರು, ಇತರ ಸದಸ್ಯರಿಂದ ಸಾಲದ ಕಂತನ್ನು ವಸೂಲಿ ಮಾಡಲು ಮುಂದಾಗಿದ್ದರು. ಇತರ ಸದಸ್ಯರು ಸಾಲದ ಕಂತು ಕಟ್ಟಿದರೆ ಮಾತ್ರ ಹೊಸ ಸಾಲ ನೀಡಲಾಗುವದು ಎಂದು ಒತ್ತಡ ಹೇರಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕರವೇ ಕಾರ್ಯಕರ್ತರು ದೂರವಾಣಿ ಮೂಲಕ ಏಜೆಂಟರನ್ನು ಸಂಪರ್ಕಿಸಿ, ಸರ್ಕಾರದ ಆದೇಶದ ವಿರುದ್ದವಾಗಿ ಮಹಿಳೆಯರಿಂದ ಹಣ ಸಂಗ್ರಹಿಸಿದರೆ ನಿಮ್ಮ ವಿರುದ್ಧ ದೂರು ನೀಡಲಾಗುವದು ಎಂದು ಎಚ್ಚರಿಸಿದರು.

ಈ ಸಂದರ್ಭ ಸಂಘದ ಸದಸ್ಯ ಮಹಿಳೆಯರೂ ಸಹ ಸಧ್ಯದ ಪರಿಸ್ಥಿತಿಯಲ್ಲಿ ಸಾಲ ಮರುಪಾವತಿ ಮಾಡಲು ಕಷ್ಟಸಾಧ್ಯವೆಂದು ತಿಳಿಸಿದರು. ಹಣ ಕಟ್ಟಿಸಿಕೊಳ್ಳಲು ಬಂದಿದ್ದ ಏಜೆಂಟರು ಸಾರ್ವಜನಿಕರ ವಿರೋಧ ಮತ್ತು ಕರವೇ ಕಾರ್ಯಕರ್ತರ ಪ್ರತಿಭಟನೆಯ ಎಚ್ಚರಿಕೆಗೆ ಹೆದರಿ ಸ್ಥಳದಿಂದ ಕಾಲ್ಕಿತ್ತರು.