ಸುಂಟಿಕೊಪ್ಪ, ಮೇ 15: ಪ್ರತಿನಿತ್ಯ ನೂರಾರು ಮಂದಿ ಹೊರರೋಗಿಗಳ ಆರೋಗ್ಯ ತಪಾಸಣೆಯಿಂದ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಏಕೈಕ ವೈದ್ಯರು ಹೈರಾಣಾಗಿದ್ದು, ಹೆಚ್ಚುವರಿ ವೈದ್ಯರ ನೇಮಕಕ್ಕೆ ಆರೋಗ್ಯ ರಕ್ಷಾ ಸಮಿತಿ ಹಾಗೂ ಜನಪ್ರತಿನಿಧಿಗಳ ಬೇಡಿಕೆಗೆ ಆರೋಗ್ಯ ಇಲಾಖಾಧಿಕಾರಿಗಳು ನಿಲ್ರ್ಯಕ್ಷಿಸಿದ್ದಾರೆ. ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನನಿತ್ಯ ನೂರಾರು ಹೊರ ರೋಗಿಗಳು ಸೇರಿದಂತೆ ಲಾಕ್ಡೌನ್ ಹಿನ್ನೆಲೆ ಪಟ್ಟಣಕ್ಕೆ ಬರುತ್ತಿರುವ ವಲಸೆ ಕಾರ್ಮಿಕರು ಆರೋಗ್ಯ ತಪಾಸಣೆಗೆಂದು ಆರೋಗ್ಯ ದೃಢೀಕರಣ ಪತ್ರ ಪಡೆಯಲು ಬೆಳಿಗ್ಗೆ 6 ರಿಂದ ಸಂಜೆ 5 ಗಂಟೆಯವರೆ ಆಸ್ಪತ್ರೆಯಲ್ಲಿ ನಿಂತಿರುತ್ತಾರೆ ದಿನವೊಂದಕ್ಕೆ ಸರಾಸರಿ 500 ರಿಂದ 600 ಮಂದಿಯ ಆರೋಗ್ಯ ತಪಾಸಣೆ ಮಾಡಲು ಸಾಕು ಸಾಕಾಗುತ್ತಿದೆ. ಇವರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಆಸ್ಪತ್ರೆಯ ಮುಂದೆ ಮುಗಿಬೀಳುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಹೆಚ್ಚುವರಿ ವೈದ್ಯರ ನೇಮಕಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.