ಮಡಿಕೇರಿ, ಮೇ 15: ನಗರದ ಕೆಎಸ್‍ಆರ್‍ಟಿಸಿ ಘಟಕ ವತಿಯಿಂದ ಬೆಳಂಗಾಲದಿಂದ ವೆಲ್ಲುಮಲೈ ಮತ್ತು ಸೇಲಂಗೆ, ಸುಂಟಿಕೊಪ್ಪದಿಂದ ವೆಲಪುರಂ, ನಮಕಲ್, ಸೇಲಂ, ತಿರುವನಮಲೈ ಮತ್ತು ಕಲಕುರ್ಚಿಗೆ, ಬೋಯಿಕೇರಿಯಿಂದ ವೆಲ್ಲಿಪುರಂಗೆ, ಸೋಮವಾರಪೇಟೆಯಿಂದ ಕಲಕುರ್ಚಿಗೆ, ಚೆಟ್ಟಳ್ಳಿಯಿಂದ ವೆಲ್ಲಿಮಲೈಗೆ ಒಟ್ಟು 11 ಕೆಎಸ್‍ಆರ್‍ಟಿಸಿ ಬಸ್ಸುಗಳಲ್ಲಿ 205 ವಲಸೆ ಕಾರ್ಮಿಕರನ್ನು ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ ಕಾರ್ಮಿಕ ಇಲಾಖೆಯಿಂದ ಮಾಸ್ಕ್, ಸ್ಯಾನಿಟೈಜರ್, ಬಿಸ್ಕತ್ತು, ಜ್ಯೂಸ್ ಮತ್ತು ಕುಡಿಯುವ ನೀರಿನ ಬಾಟಲನ್ನು ಪ್ರತಿಯೊಬ್ಬ ಕಾರ್ಮಿಕರಿಗೆ ಮತ್ತು ಬಸ್ಸಿನ ಚಾಲಕರಿಗೆ ವಿತರಿಸಿ ಕಳಿಸಿಕೊಡಲಾಯಿತು.

ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ.ಯತ್ನಟ್ಟಿ ಮಡಿಕೇರಿ ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕಿ ಗೀತಾ ಎಚ್, ಇಂಡಿಯನ್ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಬಿ.ಕೆ.ರವೀಂದ್ರ ರೈ, ಕಾರ್ಮಿಕ ಇಲಾಖೆಯ ಸಿರಾಜ್ ಅಹ್ಮದ್, ಟಿ.ವಿ.ಲಕ್ಷ್ಮೀಶ, ಕೆ.ಆರ್.ಗಣೇಶ ಇತರರು ಇದ್ದರು.