*ಗೋಣಿಕೊಪ್ಪಲು, ಮೇ 15: ಗೋವುಗಳನ್ನು ಕದ್ದು ಮಾಂಸ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ತಾರಿಕಟ್ಟೆ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಅಸೀಸ್ ಮತ್ತು ತಂಡದ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ನಿನ್ನೆ ಸಂಜೆ ಗೋಣಿಕೊಪ್ಪಲು ಪೆÇಲೀಸರು ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.
ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಅಸೀಸ್ ಗೋವುಗಳನ್ನು ಕಳ್ಳತನ ಮಾಡಿ ತನ್ನ ಮಾರುತಿ ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಪೆÇಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಂದರ್ಭ ಕಾರಿನಲ್ಲಿದ್ದ ಅಸೀಸ್ ಮತ್ತು ಇತರರು ಗೋವು ಹಾಗೂ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ.
ಇತ್ತೀಚೆಗೆ ದೇವರಪುರ, ತಿತಿಮತಿ ಮುಂತಾದ ಕಡೆಗಳಲ್ಲಿ ಗೋವು ಕಳ್ಳತನ ದಂಧೆ ಹೆಚ್ಚಾಗಿರುತ್ತದೆ. ಪೆÇಲೀಸರು ಕಾರನ್ನು ವಶಪಡಿಸಿಕೊಂಡು ಮುಂದಿನ ತನಿಖೆಗೆ ಮುಂದಾಗಿದ್ದಾರೆ.