ಮಡಿಕೇರಿ, ಮೇ 15: ದೇಶದ ರಕ್ಷಣಾ ಪಡೆಯ ಪ್ರಪ್ರಥಮ ಮಹಾದಂಡನಾಯಕ (ಕಮಾಂಡರ್ ಇನ್ ಚೀಫ್) ಖ್ಯಾತಿಯ ಜಿಲ್ಲೆಯ ಸೇನಾನಿ ಫೀ.ಮಾ. ಕಾರ್ಯಪ್ಪ ಅವರು ಸ್ವರ್ಗಸ್ಥರಾದ ಮೇ 15 ದಿನದಂದು ಹಲವಾರು ಗಣ್ಯರು ಸೇನಾನಿಯ ಕುರಿತು ಸ್ಮರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಪ್ರತಿಮ ಸೇನಾನಿಯಾಗಿದ್ದ ಕಾರ್ಯಪ್ಪ ಅವರ ದೇಶಸೇವೆ, ಶೌರ್ಯ, ಸಾಹಸ ಗಳನ್ನು ಈ ಸಂದರ್ಭ ಸ್ಮರಿಸಿ ಕೊಳ್ಳುವುದಾಗಿ ಹೇಳಿದ್ದಾರೆ. ಸಂಸದ ಪ್ರತಾಪ್ ಸಿಂಹ ಸೇರಿ ಹಲವರು ಈ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ಹಂಚಿಕೊಂಡಿದ್ದಾರೆ.
ದೇಶದ ರಕ್ಷಣಾ ಮೂರು ವಿಭಾಗಗಳ ಮುಖ್ಯಸ್ಥರಾಗಿ ಸ್ವಾತಂತ್ರ್ಯ ನಂತರ ಪ್ರಥಮ ವ್ಯಕ್ತಿ ಯಾಗಿ ಅಧಿಕಾರ ವಹಿಸಿ ಕೊಂಡಿದ್ದ ಕಾರ್ಯಪ್ಪ ಅವರಿಗೆ ಭೂ ಸೇನೆಯಲ್ಲಿ ನೀಡುವ ಅತ್ಯುನ್ನತ ಬಿರುದಾದ ಫೀಲ್ಡ್ ಮಾರ್ಷಲ್ ಪದವಿಯನ್ನು 1986 ರಲ್ಲಿ ನೀಡಿ ಗೌರವಿಸಲಾಗಿತ್ತು. 1993 ರ ಮೇ 15 ರಂದು ಕಾರ್ಯಪ್ಪ ಅವರು ವಿಧಿವಶರಾಗಿದ್ದರು.