ಮಡಿಕೇರಿ, ಮೇ 15: ಪ್ರಸಕ್ತ ಅವಧಿಯ ಗ್ರಾಮ ಪಂಚಾಯಿತಿ ಅವಧಿ ಮೇ ಮತ್ತು ಜೂನ್ ತಿಂಗಳಲ್ಲಿ ಕೊನೆಗೊಳ್ಳಲಿದೆ. ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದ ವಿಪತ್ತು ಕಾಯ್ದೆ ಜಾರಿಯಲ್ಲಿದೆ. ವಿಪತ್ತು ಕಾಯ್ದೆ ಜಾರಿಯಲ್ಲಿರುವಾಗ ಯಾವುದೇ ಚುನಾವಣೆ ನಡೆಸುವುದು ಸಾಧ್ಯವಿಲ್ಲ ಎಂದು ತೀರ್ಮಾನಕ್ಕೆ ಬಂದಿರುವ ಸರಕಾರ ಅವಧಿ ಮುಗಿಯಲಿರುವ ಗ್ರಾಮ ಪಂಚಾಯಿತಿಗಳಿಗೆ ಜೂನ್ ಮೊದಲ ಅಥವಾ ಎರಡನೇ ವಾರದಿಂದ ಒಬ್ಬ ಸರಕಾರದ ಅಧಿಕಾರಿಯನ್ನು ಅಧ್ಯಕ್ಷರನ್ನಾಗಿ ಮತ್ತು ಪ್ರಸಕ್ತ ಗ್ರಾಮ ಪಂಚಾಯಿತಿಗಳಲ್ಲಿ ಇರುವ ಸಂಖ್ಯೆಯಷ್ಟೇ ಸದಸ್ಯರನ್ನು ನಾಮ ನಿರ್ದೇಶನ ಮಾಡಲಿದೆ ಎನ್ನಲಾಗಿದೆ.
ಈ ಸಮಿತಿ ಗ್ರಾಮ ಪಂಚಾಯಿತಿಯ ಎಲ್ಲಾ ಸಭೆ ಮತ್ತು ಕಾರ್ಯಕ್ರಮಗಳನ್ನು ಈಗ ನಡೆಯುತ್ತಿರುವ ರೀತಿಯಲ್ಲಿ ಮುಂದುವರಿಸಲಿದೆ. ನಾಮ ನಿರ್ದೇಶನ ಮಾಡುವಾಗ ಗ್ರಾಮ ಪಂಚಾಯಿತಿಯಲ್ಲಿ ಹಾಲಿ ಇರುವ ಮೀಸಲಾತಿಯ ನಿಯಮದಂತೆ ಸದಸ್ಯರ ನಾಮ ನಿರ್ದೇಶನ ಮಾಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.
- ಎಂ. ಯೂಸಫ್ ಪಟೇಲ್.