ನಾಪೆÇೀಕ್ಲು: ಸರೋಜಿನಿ ದಾಮೋದರ ಫೌಂಡೇಷನ್ ವತಿಯಿಂದ ಕುಂಜಿಲ, ಕಕ್ಕಬೆ, ಯವಕಪಾಡಿ ಗ್ರಾಮದ ಗಿರಿಜನ ಕುಟುಂಬದವರಿಗೆ ನೀಡಲಾದ ಆಹಾರದ ಕಿಟ್ಟನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು.

ಈ ಸಂದರ್ಭ ಫೌಂಡೇಷನ್‍ನ ಶಿಬೂಲಾಲ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೋಳಿಯಾಡಿರ ಸಂತು ಸುಬ್ರಮಣಿ, ತಾಮರ ಕೂರ್ಗ್‍ನ ವ್ಯವಸ್ಥಾಪಕ ಕಲಿಯಾಟಂಡ ಗಿರೀಶ್ ಸುಬ್ಬಯ್ಯ, ಸಂತೋಷ್ ಉತ್ತಪ್ಪ, ವನವಾಶಿನಿ ಎನ್.ಜಿ.ಒ. ಪ್ರಭು, ಕಲಿಯಂಡ ಸುನಂದ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಕುಡಿಯರ ಮುತ್ತಪ್ಪ ಇದ್ದರು.ಗುಡ್ಡೆಹೊಸೂರು: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಮದೆನಾಡು ಸಮೀಪದ ಬೆಟ್ಟತ್ತೂರು ಗ್ರಾಮದ ಬೆಟ್ಟದಲ್ಲಿ ನೆಲಸಿದ್ದ ಗ್ರಾಮಸ್ಥರಾದ ರಾಮಯ್ಯ ನಾಯ್ಕ, ಹೆಮ್ಮರ ಈಶ್ವರ, ಕುಡಿಯರ ಕರುಂಬಯ್ಯ, ಕುಡಿಯರ ಮನು, ತಳೂರು ಶಿವಣ್ಣ ಅವರಿಗೆ ಅಗತ್ಯ ತರಕಾರಿ, ದಿನಸಿ ವಸ್ತುಗಳನ್ನು ವಿತರಿಸಲಾಯಿತು.

ಈ ಸಂದರ್ಭ ವೇದಿಕೆಯ ಅಧ್ಯಕ್ಷ ಪೈಕೆರ ಮನೋಹರ ಮಾದಪ್ಪ, ನಿರ್ದೇಶಕರಾದ ಲಕ್ಷ್ಮಣ ಕುಕ್ಕೆರ, ದಂಬೆಕೊಡಿ ಗಯ, ತೇಜಸ್ ಚೀಯಂಡಿ, ಲೋಕಯ್ಯ ಮುಂತಾದವರು ಹಾಜರಿದ್ದರು. ಕಡಿಯತ್ತೂರು ಗ್ರಾಮದ ಗ್ರಾಮಸ್ಥರು ಲಾಕ್‍ಡೌನ್‍ನಿಂದಾಗಿ ಮಡಿಕೇರಿಗೆ ಬರಲು ಸಾಧ್ಯವಾಗದ ವಿಷಯ ತಿಳಿದ ಜಿಲ್ಲಾ ಗೌಡ ಯುವ ವೇದಿಕೆಯ ಅಧ್ಯಕ್ಷರು ಮತ್ತು ತಂಡ ನೆರವು ನೀಡಿದ್ದಾರೆ.*ಗೋಣಿಕೊಪ್ಪಲು: ಕೊರೊನಾ ಮಹಾಮಾರಿಯ ಆತಂಕದಿಂದ ಆರ್ಥಿಕ ಸಂಕಷ್ಟ್ಟಕ್ಕೆ ಸಿಲುಕಿ ಬಳಲುತ್ತಿರುವ ಕುಟುಂಬಗಳಿಗೆ ಗೋಣಿಕೊಪ್ಪ ಪಟ್ಟಣದ ಮೂವರು ಸ್ನೇಹಿತರ ತಂಡ ಸಹಾಯ ಹಸ್ತ ನೀಡಿ ದಿನಸಿ ಪದಾರ್ಥಗಳನ್ನು ವಿತರಿಸಿದರು.

ಗೋಣಿಕೊಪ್ಪಲು ಕಾಮತ್ ಹೊಟೇಲ್ ಮಾಲೀಕ ಪ್ರಮೋದ್ ಕಾಮತ್, ನಾಗಲಕ್ಷ್ಮಿ ಚಿನ್ನದ ಮಳಿಗೆ ಮಾಲೀಕ ನಾಗರಾಜ್ ಮತ್ತು ಕೊಡಗು ಧ್ವನಿ ವಾರಪತ್ರಿಕೆಯ ಸಂಪಾದಕ ಹೆಚ್.ಕೆ. ಜಗದೀಶ್ ಇವರುಗಳು ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳನ್ನು ಪತ್ತೆಹಚ್ಚಿ ಅವರಿಗೆ ದಿನಸಿ ಪದಾರ್ಥಗಳನ್ನು ನೀಡಿದರು.

ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ವಾಹನ ಚಾಲಕರ ಸಂಘದ ಸದಸ್ಯರಿಗೆ ದಿನಸಿ ಪದಾರ್ಥಗಳನ್ನು ಆಶ್ರಮದ ಅಧ್ಯಕ್ಷ ಬೋಧಸ್ವರೂಪನಂದಾಜೀ ವಿತರಿಸಿದರು. ವಾಹನ ಚಾಲಕರ ಸಂಘದ ಅಧ್ಯಕ್ಷ ಸಿ.ಕೆ. ಬೋಪಣ್ಣ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.ವೀರಾಜಪೇಟೆ: ವೀರಾಜಪೇಟೆ ಪಟ್ಟಣದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರುಗಳು ಸಾರ್ವಜನಿಕವಾಗಿ ಕಾಟನ್‍ನ ಗುಣಮಟ್ಟದ ಮಾಸ್ಕನ್ನು ಉಚಿತವಾಗಿ ವಿತರಿಸಿದರು.

ರೀಬಿಲ್ಡ್ ಕೊಡಗು ಸೇವಾ ಸಂಸ್ಥೆಯವರು ತಯಾರಿಸಿದ ಸುಮಾರು 1000 ಗುಣಮಟ್ಟದ ಮಾಸ್ಕ್‍ಗಳನ್ನು ಬಿ.ಜೆ.ಪಿ. ಕಾರ್ಯಕರ್ತರು ಖರೀದಿಸಿ ಪಟ್ಟಣದಲ್ಲಿ ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದವರಿಗೆ, ಕೂಲಿ ಕಾರ್ಮಿಕರಿಗೆ, ನಿರ್ಗತಿಕರು, ಕಡು ಬಡವರು ಹಾಗೂ ಸಾರ್ವಜನಿಕರಿಗೆ ವಿತರಣೆ ಮಾಡಿದರು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾಸ್ಕ್ ವಿತರಣೆ ಕಾರ್ಯಕ್ರಮಕ್ಕೆ ಶಾಸಕರ ಕೊಠಡಿಯ ಆವರಣದಲ್ಲಿ ಚಾಲನೆ ನೀಡಿದರು. ಈ ಸಂದರ್ಭ ಪಕ್ಷದ ಜಿಲ್ಲಾ ಸಮಿತಿಯ ಕಾನೂನು ಘಟಕದ ಬಿ.ಆರ್. ಶೆಟ್ಟಿ, ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ರೀ ಬಿಲ್ಡ್ ಕೊಡಗು ಸೇವಾ ಸಂಸ್ಥೆಯ ಕೇಳಪಂಡ ಕುಶಾಲಪ್ಪ, ಮಲ್ಲಂಡ ಮಧು ದೇವಯ್ಯ, ಇ.ಸಿ. ಜೀವನ್, ಅಲ್ಪಸಂಖ್ಯಾತರ ಘಟಕದ ರಾಜ್ಯ ಸಮಿತಿಯ ಜೋಕೀಂ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.ಮಡಿಕೇರಿ: ಕೋವಿಡ್-19 ಹಿನ್ನೆಲೆ ವಿಶ್ವ ರೆಡ್‍ಕ್ರಾಸ್ ದಿನದ ಪ್ರಯುಕ್ತ ರೆಡ್‍ಕ್ರಾಸ್ ಕೊಡಗು ಘಟಕ ವತಿಯಿಂದ ಪರಿಶಿಷ್ಟ ಪಂಗಡ ಗಿರಿಜನ ಹಾಡಿಯ ಜನರಿಗೆ 5 ಸಾವಿರ ಮಾಸ್ಕ್, 1 ಸಾವಿರ ಸ್ಯಾನಿಟೈಸರ್, 2 ಸಾವಿರ ಸೋಪ್ ಮತ್ತು 150 ಮಂದಿಗೆ ಬೆಡ್‍ಶೀಟ್ ಮತ್ತಿತರ ಅಗತ್ಯ ಪರಿಕರಗಳನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮೂಲಕ ತಾ. 8 ರಂದು ಹಸ್ತಾಂತರಿಸಲಾಯಿತು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆ, ರೆಡ್‍ಕ್ರಾಸ್ ಘಟಕದ ಸಹಯೋಗ ದೊಂದಿಗೆ ಮುಂದಿನ ದಿನಗಳಲ್ಲಿ ಅಗತ್ಯ ಪರಿಕರಗಳನ್ನು ಹಾಡಿಗಳಿಗೆ ತಲುಪಿಸ ಲಾಗುವುದು ಎಂದು ರೆಡ್‍ಕ್ರಾಸ್ ಜಿಲ್ಲಾ ಸಭಾಪತಿ ಬಿ.ಕೆ. ರವೀಂದ್ರ ರೈ ತಿಳಿಸಿದರು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಸಿ. ಶಿವಕುಮಾರ್, ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟ್ಟಿ, ರೆಡ್‍ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್. ಮುರಳೀಧರ್, ಧನಂಜಯ ಇದ್ದರು.