ಕುಶಾಲನಗರ, ಮೇ 12: ಕುಶಾಲನಗರ-ಮಡಿಕೇರಿ ನಡುವೆ ಪ್ರಯಾಣಿಸುವ ಜನರ ಸಂಖ್ಯೆ ಏರಿಕೆಯಾಗಿದ್ದು ಸರಕಾರಿ ಬಸ್‍ಗಳಲ್ಲಿ ನಿಯಮ ಮೀರಿ ಪ್ರಯಾಣಿಕರನ್ನು ಒಯ್ಯುತ್ತಿರುವ ದೃಶ್ಯ ಕಂಡುಬಂದಿದೆ. ಬೆಳಗಿನ ವೇಳೆ ಮಡಿಕೇರಿಗೆ ಸರಕಾರಿ ನೌಕರರು, ಖಾಸಗಿ ಸಂಸ್ಥೆ ಉದ್ಯೋಗಿಗಳು, ವ್ಯಾಪಾರ ವಹಿವಾಟುದಾರರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿದ್ದು ಬಸ್‍ಗಳಲ್ಲಿ ತಾಮುಂದು ನಾಮುಂದು ಎಂಬಂತೆ ಪ್ರಯಾಣದಲ್ಲಿ ತೊಡಗಿರುವುದು ಕಂಡುಬಂದಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಕುಶಾಲನಗರ-ಮಡಿಕೇರಿ ನಡುವೆ ಬಸ್‍ಗಳ ಸಂಖ್ಯೆಯಲ್ಲಿ ಏರಿಕೆ ಮಾಡುವಂತೆ ಪ್ರಯಾಣಿಕರು ಕೋರಿದ್ದಾರೆ.