ಮಡಿಕೇರಿ, ಮೇ 13: ಕೊರೊನಾ (ಕೋವಿಡ್-19) ಹರಡುವುದನ್ನು ನಿಯಂತ್ರಿಸಲು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಲು ಮಡಿಕೇರಿ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ ಅವಲಂಭಿತರು ತಮ್ಮ ವೈದ್ಯಕೀಯ ಸಲಹೆ ಮತ್ತು ತಪಾಸಣೆಗಾಗಿ ಈ ಕೆಳಗೆ ನೀಡಿರುವ ದೂರವಾಣಿ ಸಂಖ್ಯೆಗಳಾದ 08272-220024 ಮತ್ತು 08272-298406ಗಳ ಮೂಲಕ ವೈದ್ಯರೊಂದಿಗೆ ಸಂದರ್ಶನವನ್ನು ಕೆಲಸದ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12.30 ರೊಳಗೆ ನೋಂದಣಿ ಮಾಡಿಕೊಳ್ಳಬೇಕಾಗಿ ವಿನಂತಿ.
ಇ.ಸಿ.ಹೆಚ್.ಎಸ್. ಅವಲಂಭಿತರು ತಮ್ಮ ಔಷಧಿಯ ರಸೀತಿ ಮತ್ತು ಅದಕ್ಕೆ ಸಂಬಂಧಿಸಿದ ದಾಖಲಾತಿಗಳಾದ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಮತ್ತು ಇ.ಸಿ.ಹೆಚ್.ಎಸ್. ಕಾರ್ಡ್ನ ಪ್ರತಿಯನ್ನು ಜೂನ್ 10 ರೊಳಗಡೆ ನಮ್ಮ ಕಚೇರಿಗೆ ತಲುಪಿಸಬೇಕಾಗಿ ವಿನಂತಿ.