ಮಡಿಕೇರಿ, ಮೇ 12 : ವಿಶೇಷಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ (ಎನ್ಪಿಆರ್ಪಿಡಿ) ತಾಲೂಕಿನಲ್ಲಿ ವಿವಿದೋದ್ದೇಶ ಪುನರ್ವಸತಿ ಕಾರ್ಯರ್ತರ ಒಂದು ಹುದ್ದೆ ಮತ್ತು 2 ಪಟ್ಟಣ ಪಂಚಾಯಿತಿಗಳಲ್ಲಿ ಖಾಲಿ ಇರುವ ನಗರ ಪುನರ್ವಸತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಬಯಸುವವರು ಜೂನ್ 30 ರೊಳಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಡಿಕೇರಿ, ಕೊಡಗು ಜಿಲ್ಲೆ ಈ ಕಚೇರಿಗೆ ಅರ್ಜಿ ಸಲ್ಲಿಸಬೇಕು.
ಹುದ್ದೆಯ ವಿವರ: ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು, ಮಾಸಿಕ ಗೌರವ ಧನ ರೂ. 12 ಸಾವಿರ. ವಿದ್ಯಾರ್ಹತೆ: ಯಾವುದೇ ಪದವಿ ಪಡೆದಿರಬೇಕು, ವಿಶೇಷಚೇತನತೆ ಪ್ರಮಾಣ ಶೇ. 40 ಕ್ಕಿಂತ ಮೇಲ್ಪಟ್ಟು ಶೇ. 75 ಕ್ಕಿಂತ ಕಡಿಮೆ ಇರಬೇಕು. ವಯಸ್ಸು 18 ರಿಂದ 45 ವರ್ಷದ ವಯೋಮಾನದª Àರಾಗಿರಬೇಕು.
ನಗರ ಪುನರ್ವಸತಿ ಕಾರ್ಯ ಕರ್ತರು ಮಾಸಿಕ ಗೌರವ ಧನ ರೂ. 6 ಸಾವಿರ. ವಿದ್ಯಾರ್ಹತೆ: ಎಸ್ಎಸ್ಎಲ್ಸಿ ಉತ್ತೀರ್ಣ/ ಅನುತ್ತೀರ್ಣ, ವಿಶೇಷಚೇತನತೆ ಪ್ರಮಾಣ ಶೇ. 40 ಕ್ಕಿಂತ ಮೇಲ್ಪಟ್ಟು ಶೇ. 75 ಕ್ಕಿಂತ ಕಡಿಮೆ ಇರಬೇಕು. ವಯಸ್ಸು 18 ರಿಂದ 45 ವರ್ಷದ ವಯೋಮಾನದವರಾಗಿರಬೇಕು.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಮಾಸಿಕ ಗೌರವ ಧನ ರೂ. 6 ಸಾವಿರ. ವಿದ್ಯಾರ್ಹತೆ: ಎಸ್ಎಸ್ಎಲ್ಸಿ ಉತ್ತೀರ್ಣ/ ಅನುತ್ತೀರ್ಣ, ವಿಶೇಷಚೇತನತೆ ಪ್ರಮಾಣ ಶೇ. 40 ಕ್ಕಿಂತ ಮೇಲ್ಪಟ್ಟು ಶೇ. 75 ಕ್ಕಿಂತ ಕಡಿಮೆ ಇರಬೇಕು. ವಯಸ್ಸು 18 ರಿಂದ 45 ವರ್ಷದ ವಯೋಮಾನದವರಾಗಿರಬೇಕು.
ಖಾಲಿ ಇರುವ ಹುದ್ದೆಗಳ ವಿವರ: ಎಂಆರ್ಡಬ್ಲ್ಯು: ಮಡಿಕೇರಿ ತಾಲೂಕು ಪಂಚಾಯಿತಿ, ಯುಆರ್ಡಬ್ಲ್ಯು: ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ವೀರಾಜಪೇಟೆ ಪಟ್ಟಣ ಪಂಚಾಯಿತಿ.
ವಿಆರ್ಡಬ್ಲ್ಯು ಹುದ್ದೆಗಳು ಖಾಲಿ ಇರುವ ವಿವರ: ಮಡಿಕೇರಿ ತಾಲೂಕು: ಬೇಂಗೂರು ಬಲ್ಲಮಾವಟಿ, ಚೆಂಬು, ಕೆ. ನಿಡುಗಣೆ, ಕುಂದಚೇರಿ, ಕುಂಜಿಲ, ಕೊಣಂಜಗೇರಿ, ನರಿಯಂದಡ, ಎಮ್ಮೆಮಾಡು. ಸೋಮವಾರಪೇಟೆ ತಾಲೂಕು: ಬ್ಯಾಡಗೊಟ್ಟ, ಬೆಟ್ಟದಳ್ಳಿ, ಬೇಳೂರು, ಚೆಟ್ಟಳ್ಳಿ, ದುಂಡಳ್ಳಿ, ದೊಡ್ಡಮಳ್ತೆ, ಹಂಡ್ಲಿ, ಕಂಬಿಬಾಣೆ, ನೇರುಗಳಲೆ, ಶನಿವಾರಸಂತೆ, ಕೆದಕಲ್, ಚೌಡ್ಲು, ಕಿರುಗಂದೂರು, ಆಲೂರು-ಸಿದ್ದಾಪುರ. ವೀರಾಜಪೇಟೆ ತಾಲೂಕು: ಅಮ್ಮತ್ತಿ, ಅರುವತ್ತೋಕ್ಲು, ಬಾಳೆಲೆ, ಬಿರುನಾಣಿ, ಬಿ. ಶೆಟ್ಟಿಗೇರಿ, ಬಲ್ಯಮಂಡೂರು, ಚಂಬೆಬೆಳ್ಳೂರು, ದೇವರಪುರ, ಗೋಣಿಕೊಪ್ಪ, ಹೊಸೂರು, ಹುದಿಕೇರಿ, ಹಾಲುಗುಂದ, ಕಾನೂರು, ನಿಟ್ಟೂರು, ನಾಲ್ಕೇರಿ, ಪೊನ್ನಂಪೇಟೆ, ಪೊನ್ನಪ್ಪಸಂತೆ, ಸಿದ್ದಾಪುರ, ಟಿ. ಶೆಟ್ಟಿಗೇರಿ, ಆರ್ಜಿ, ಕೆ.ಬಾಡಗ, ಕಿರುಗೂರು, ಪಾಲಿಬೆಟ್ಟ, ತಿತಿಮತಿ, ಶ್ರೀಮಂಗಲ, ಚೆನ್ನಯ್ಯನಕೋಟೆ ಭಾಗದಲ್ಲಿ ಹುದ್ದೆಗಳು ಖಾಲಿ ಇವೆ ಎಂದು ಜಿಲ್ಲಾ ವಿಶೇಷಚೇತನರ ಇಲಾಖೆಯ ಕಲ್ಯಾಣಾಧಿಕಾರಿ ಸಂಪತ್ ಕುಮಾರ್ ತಿಳಿಸಿದ್ದಾರೆ.