ಕುಶಾಲನಗರ, ಮೇ 12: ಕೋವಿಡ್-19 ವಿರುದ್ಧ ಹೋರಾಡಲು ನೆರವಾಗುವ ನಿಟ್ಟಿನಲ್ಲಿ ಕುಶಾಲನಗರದ ನಿವೃತ್ತ ಸರಕಾರಿ ನೌಕರರ ಸಂಘದ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಸಾವಿರ ರೂಪಾಯಿಗಳ ಚೆಕ್ ನೀಡಲಾಯಿತು. ಸಂಘದ ಪದಾಧಿಕಾರಿಗಳು ಶಾಸಕ ಅಪ್ಪಚ್ಚು ರಂಜನ್ ಅವರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ರಾಘವಯ್ಯ, ಉಪಾಧ್ಯಕ್ಷ ಎಂ.ಬಿ. ಮೊಣ್ಣಪ್ಪ, ಖಜಾಂಚಿ ಕೆ.ಎ. ನಾಣಯ್ಯ, ನಿಕಟಪೂರ್ವ ಅಧ್ಯಕ್ಷರಾದ ಬೊಮ್ಮಯ್ಯ, ಉತ್ತಪ್ಪ, ಸದಸ್ಯೆ ಪಾರ್ವತಿ ಇದ್ದರು.