ಪರಿಶುದ್ಧ ಭಾವಕ್ಕೆ ಮಾತ್ರವೇ, ನೈಸರ್ಗಿಕ ಹಾಗೂ ತನ್ನ ಸುತ್ತಮುತ್ತಲಿನ ಪರಿಸರವೂ ಆಪ್ಯಾಯಮಾನವಾಗುವುದು. ಎಲ್ಲದರಲ್ಲೂ ಸಂತಸ ಕಾಣುವ ದೃಷ್ಟಿಯೊದಗುವುದು. ಹಾಲಿಗೆಂದು ಹೊರಡುತ್ತೇವೆ. ಎಷ್ಟು ಜನ ಗಮನಿಸಿಯೇವು ಬಹÅಮನೆಯ ರಂಗೋಲಿಗಳ. ಅದು ತನ್ನ ಮನೆಯ ಮುಂದಿಲ್ಲದಿದ್ದರೂ, ಅನ್ಯರ ಮನೆಯ ಮುಂಬಾಗಿಲ ಚಿತ್ತಾರವನ್ನು ಚಿತ್ತಾಕರ್ಷಕ ಎನ್ನುವ ಮಾತು ಹೃದಯಾಂತರಾಳದಿಂದ ಬರುವುದು ಯಾರಿಗೆ ಸಾಧ್ಯ ? ಹೃದಯವಂತನಿಗೆ, ಸಾತ್ವಿಕ ನೋಟದ ಸತ್ವಶಾಲಿಗೆ ಮಾತ್ರ.
“ಹಾಲಿಗೆಂದು ಹೆÇರಟಾಗ ಹೆÇತ್ತಾರೆ ಚಿತ್ತಾಪಹಾರಿ ಚಿತ್ತಾರ
ಖಾಲಿ ಮನಸಿನ ಖೋಲಿ-ಖೋಲಿಗಳ ಬೀಗ ತೆರೆದು
ತುಂಬುವುದೆಂಥ ಭಾವಾವೇಗ.”
......ಜಾಮಿತಿಯ ಜಟಿಲ ಸೂತ್ರಗಳಿಗೆಲ್ಲ ದಕ್ಕಿರುವುದಿಲ್ಲಿ ಮಿಗಿಲರ್ಥ’
ಇಂತಹ ದೃಷ್ಟಿಕೋನದ ಮಾತುಗಳನ್ನು ಹೆÇರಸೂಸಿದವರು ಇತ್ತೀಚೆಗೆ ನಮ್ಮನ್ನಗಲಿದ ಕವಿ ನಿಸಾರ್‍ಅಹಮದ್‍ರ ‘ರಂಗವಲ್ಲಿ’ ಕವಿತೆಯಲ್ಲಿ. ಬಹÅಶಃ ಪದವಿಪೂರ್ವ ಶಿಕ್ಷಣದವರಿಗೆ ಈ ಪದ್ಯ ಇತ್ತೆಂಬ ನೆನಪು.
ಇಂತಹ ನಿಸಾರ್ ಅವರು [ಬೇಡ. ಅವರ ಕವಿತೆಗಳು ಯಾವುವೂ ನಿಸ್ಸಾರವಲ್ಲ. ಎಲ್ಲವೂ ಸಾರಯುತ, ಅಹಮದ್ ಎಂದೇ ಪ್ರೀತಿಯಿಂದ ಹೇಳೋಣ] ಪ್ರತಿಯೊಂದರಲ್ಲೂ ಹೆÇಸತನ್ನು ಕಾಣುತ್ತಾ, ಅದನ್ನು ಅಂತರ್ಭಾವವ ನ್ನಾಗಿಸಿಕೊಳ್ಳುತ್ತಿದ್ದರೋ ಏನೋ. ಅವರ ‘ನಿತ್ಯೋತ್ಸವ’ ಕವನ ಸಂಕಲನದ ‘ಕುರಿಗಳು ಸಾರ್..’ ಕವನದಲ್ಲಿ ಡೊಂಕನ್ನು ತಿದ್ದುವಾಗ ಮೊದಲು ‘ನಾವ್ ಕುರಿಗಳು..’ ಎಂದು ತಮ್ಮನ್ನೂ ಸೇರಿಸಿ ಹೇಳಿಕೊಳ್ಳುತ್ತಾರೆ. ವಿಚಾರವೆಂಥದೇ ಇರಲಿ ಮೊದಲು ತನಗೆ ಅನ್ವಯಿಸಿಕೊಂಡು, ನಂತರ ಇತರರಿಗೆ ಹೇಳಿದರೆ ಅದು ನಿಜಾರ್ಥದ ಸಂದೇಶ ಸಾರುವ ಮಾತಾಗುತ್ತದೆ.
ಪ್ರತಿಯೊಂದರಲ್ಲೂ ಹೆÇಸ-ಹೆÇಸ ಅಂತರಾರ್ಥವನ್ನು ಕಂಡುಕೊಳ್ಳು ತ್ತಿದ್ದುದರಿಂದಲೋ ಏನೋ, ಅವರಿಗೆ ನಾಡಿನ ಪ್ರತಿ ಕಣ, ಪ್ರತಿ ಮನ ‘ಸಂತಸದ ನಿತ್ಯೋತ್ಸವ’ ನೀಡುತ್ತಿತ್ತು. ಅವರು ಅನ್ಯರ ಕುರಿತು ಹೇಳಿದ ಮಾತು ಇಂದು ಅವರಿಗೇ ಅನ್ವಯ
ಮಾತೃಭಾಷೆ ಕನ್ನಡ ಎಂದುಕೊಳ್ಳುವ ನಾವು-ನಮ್ಮ ಮಕ್ಕಳೂ ನಿತ್ಯೋತ್ಸವದ ಕವಿಯಷ್ಟು ಶುದ್ಧವಾಗಿ ಕನ್ನಡವನ್ನು ಬಳಸುತ್ತೇವೋ ಇಲ್ಲವೋ! ಕನ್ನಡ ಮಾತೃಭಾಷೆಯಲ್ಲದ ಆದರೆ ಹೃದಯದ ಭಾಷೆಯಾಗಿದ್ದ ನಿಸ್ಸಾರ್ ಅವರ ಮಾತು ನಮಗೆ-ನಮ್ಮ ಅಹಮಿಕೆಗೆ ಎಚ್ಚರಿಕೆಯ ಗಂಟೆಯಂತಿದೆ. ಏಕಮುಖ ಚಿಂತನೆಯ, ಅನ್ಯರ ನಿಂದಿಸಿ ತಾ ದೊಡ್ಡವನೆನೆಸಿಕೊಳ್ಳಬೇಕೆಂಬ ಹೆಚ್ಚುಗಾರಿಕೆಯನ್ನು ಮೆರೆಸುವ ಎಲ್ಲರಿಗೂ ಇದು ಪಥದರ್ಶಿ. ಇಂತಹ ದೃಷ್ಟಿಕೋನದಿಂದಲಾದರೂ ನಿಸಾರ್ ಅಹಮದರ ಕೃತಿಗಳ ಚಿಂತನ-ಮಂಥನ ಮತ್ತೆ-ಮತ್ತೆ ನಡೆಯಲಿ. ಸಮಾಜಕ್ಕೆ ಬೆಳಕಾಗಲಿ.
?ಯು. ಆರ್. ನಾಗೇಶ್