ಪೆರಾಜೆ, ಮೇ 11 : ಕೊರೊನಾ ವೈರಸ್ ಭಯದ ನಡುವೆ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಸೇವಾ ಭಾರತಿ ವತಿಯಿಂದ ಹಾಗೂ ಬಿಜೆಪಿಯಿಂದ ಅಕ್ಕಿ ವಿತರಣೆಯನ್ನು ಮಾಡಲಾಯಿತು. ಈ ಸಂದರ್ಭ ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಚೆದ್ಕಾರ್, ಉಪಾಧ್ಯಕ್ಷ ಸುಂದರ್ ಬಿಸಿಲುಮನೆ, ಸದಸ್ಯರಾದ ರಮಾದೇವಿ ಬಾಲಚಂದ್ರ ಕಳಗಿ, ಕೃಷ್ಣ ಬಿ.ಕೆ. ಪಕ್ಷದ ಹಿರಿಯರಾದ ರಮಾನಂದ ಬಾಳಕಜೆ, ಓ.ಆರ್. ಮಾಯಿಲಪ್ಪ, ಕೊರಗಪ್ಪ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.