ಕೂಡಿಗೆ, ಮೇ 11: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕೊಡಗಿನ ಗಡಿ ಭಾಗ ಶಿರಂಗಾಲ ಗೇಟ್‍ನಲ್ಲಿರುವ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೊರ ಜಿಲ್ಲೆಯಿಂದ ಬರುವ, ಹೋಗುವ ಜನರ ತಪಾಸಣೆ ಮತ್ತು ನೋಂದಣಿ ಕಾರ್ಯದ ಬಗ್ಗೆ ಮಾಹಿತಿ ಪಡೆದರು. ನಂತರ ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಆರೋಗ್ಯ ತಪಾಸಣೆಯ ಮಾಹಿತಿಯನ್ನು ಪಡೆದರು. ಸ್ಥಳದಲ್ಲಿದ್ದ ಆಶಾ ಕಾರ್ಯಕರ್ತೆ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕೆಲಸವನ್ನು ಶ್ಲಾಘಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಶ್ರೀನಿವಾಸ ಮಂಜಳಾ ತಾಲೂಕು ಪಂಚಾಯಿತಿ ಸದಸ್ಯ ಜಯಣ್ಣ ಸೇರಿದಂತೆ ಸ್ಥಳೀಯ ಗ್ರಾಮದ ಪ್ರಮುಖರು ಕುಶಾಲನಗರ ಡಿವೈಎಸ್‍ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್ ಸೇರಿದಂತೆ ಮೊದಲಾದವರು ಇದ್ದರು.

ಕೂಡಿಗೆ ಡೈರಿಗೆ ಭೇಟಿ

ಕೂಡಿಗೆ ಡೈರಿಗೂ ಭೇಟಿ ನೀಡಿದ ರಂಜನ್ ಲಾಕ್‍ಡೌನ್ ಸಂದರ್ಭ ದಲ್ಲೂ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿರುವ ಕೂಡಿಗೆ ಡೈರಿಯ ನೌಕರರನ್ನು ಅಭಿನಂದಿಸಿದರು.

ಈ ಸಂದರ್ಭ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಹೇಮಂತ್ ಕುಮಾರ್, ಡೈರಿ ಮಾರುಕಟ್ಟೆ ಅಧೀಕ್ಷಕ ಎ.ಎಂ. ಸೋಮಯ್ಯ, ತಾಂತ್ರಿಕ ಅಧಿಕಾರಿ ರಾಮಕೃಷ್ಣ ಸೇರಿದಂತೆ ಕುಶಾಲನಗರ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಚರಣ ಪ್ರಮುಖರಾದ ಮನು ವೈಶಾಕ್ ಉಮಶಂಕರ್ ಶಿವಕುಮಾರ್ ಮೊದಲಾದವರು ಇದ್ದರು.