ಸೋಮವಾರಪೇಟೆ,ಮೇ 11: ಕೊರೊನಾ ಸಂಕಷ್ಟದ ದಿನಗಳ ಹಿನ್ನೆಲೆ ಸಹಾಯ ಹಸ್ತ ಚಾಚಲು ತೆರೆಯಲಾಗಿರುವ ಪಿ.ಎಂ. ಕೇರ್ಸ್ ನಿಧಿಗೆ ಸಂಗ್ರಹಿಸಲಾದ ಹಣವನ್ನು ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮೂಲಕ ಹಸ್ತಾಂತರಿಸಿದರು.

ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯ 186 ಮಂದಿಯಿಂದ ಸಂಗ್ರಹಿಸಿದ 36,000 ಹಣವನ್ನು ಶಾಸಕ ರಂಜನ್ ಅವರ ಮೂಲಕ ಪಿ.ಎಂ. ಕೇರ್ಸ್‍ಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ನಳಿನಿ ಗಣೇಶ್,ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಸುಮಾ ಸುದೀಪ್, ಜಿಲ್ಲಾ ಉಪಾಧ್ಯಕ್ಷೆ ಉಷಾ ತೇಜಸ್ವಿ, ಪ.ಪಂ. ಮಾಜೀ ಅಧ್ಯಕ್ಷೆ ಲೀಲಾ ನಿರ್ವಾಣಿ, ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ ಅವರುಗಳು ಹಾಜರಿದ್ದರು.