ಕುಶಾಲನಗರ, ಮೇ 11: ಅಂತರಜಿಲ್ಲಾ ಪ್ರಯಾಣಿಕರ ಪಾಸುಗಳನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಕುಶಾಲನಗರ ಪೆÇಲೀಸರು ಕಾರನ್ನು ವಶಕ್ಕೆ ಪಡೆದುಕೊಂಡು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ರಾಜ್ಯದ ಒಳಗಡೆ ಅಂತರ್ ಜಿಲ್ಲಾ ಸಂಚಾರಕ್ಕೆ ಆನ್ಲೈನ್ ಪಾಸ್ ಮೂಲಕ ಜಿಲ್ಲೆಗೆ ಆಗಮಿಸಿ ಮೋಜು-ಮಸ್ತಿ ಮಾಡಿ ಬೆಂಗಳೂರಿಗೆ ಹಿಂತಿರುಗುತ್ತಿದ್ದ ಸಂದರ್ಭ ಸಂಶಯಗೊಂಡ ಕುಶಾಲನಗರ ಪೆÇಲೀಸರು ಈ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. ಕುಶಾಲನಗರ ಪೆÇಲೀಸ್ ವೃತ್ತ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ಸಿಬ್ಬಂದಿಗಳು ಗೇಟ್ ಬಳಿ ಪರಿಶೀಲಿಸಿದ ಸಂದರ್ಭ ಮದ್ಯಪಾನ ಮಾಡಿ ಕಾರು ಚಾಲನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಇಬ್ಬರು ವ್ಯಕ್ತಿಗಳು ಜಿಲ್ಲೆಯ ಗೋಣಿಕೊಪ್ಪಕ್ಕೆ ಆಗಮಿಸಿ ವಾಪಸ್ ಬೆಂಗಳೂರಿಗೆ ಹೋಗುವ ಸಂದರ್ಭ ಈ ಪ್ರಕರಣ ಪತ್ತೆಯಾಗಿದೆ. ಇದೇ ರೀತಿ ಹಲವಾರು ಮಂದಿ ಆನ್‍ಲೈನ್ ಪಾಸುಗಳನ್ನು ದುರುಪಯೋಗ ಮಾಡಿಕೊಂಡು ಜಿಲ್ಲೆಗೆ ಬರುತ್ತಿರುವ ಬಗ್ಗೆ ಪೆÇಲೀಸರಿಗೆ ಸಂಶಯ ಬಂದಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.