ಕುಶಾಲನಗರ-ಕೊಪ್ಪ ಗೇಟ್‍ನಿಂದ ನಿನ್ನೆ ಬಂದ 396 ಮಂದಿ ಸೇರಿದಂತೆ ಇದುವರೆಗೆ ಒಟ್ಟು 5,366 ಮಂದಿ ಅಂತರ ಜಿಲ್ಲೆಯಿಂದ ಜಿಲ್ಲೆಗೆ ಬಂದಿದ್ದಾರೆ. ನಿನ್ನೆ ಬಂದ 18 ಮಂದಿ ಹೊರ ರಾಜ್ಯದವರು ಸೇರಿ ಇದುವರೆಗೆ 207 ಮಂದಿ ಹೊರ ರಾಜ್ಯದಿಂದ ಆಗಮಿಸಿದ್ದಾರೆ.

ಸಂಪಾಜೆ ಗೇಟ್‍ನಿಂದ ನಿನ್ನೆ ಬಂದ 87 ಮಂದಿ ಸೇರಿ ಇದುವರೆಗೆ 656 ಮಂದಿ ಅಂತರ ಜಿಲ್ಲೆಯವರು ಜಿಲ್ಲೆಗೆ ಬಂದಿದ್ದಾರೆ. ಹೊರ ರಾಜ್ಯದಿಂದ ನಿನ್ನೆ ಬಂದ 21 ಮಂದಿ ಸೇರಿ ಇದುವರೆಗೆ 79 ಮಂದಿ ಹೊರ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದ್ದಾರೆ.