ಸೋಮವಾರಪೇಟೆ, ಮೇ 11: ಹಾಸನ ಜಿಲ್ಲೆಯ ಕೊಣನೂರಿನಿಂದ ಗೋ ಮಾಂಸವನ್ನು ಸೋಮವಾರಪೇಟೆ ಪಟ್ಟಣಕ್ಕೆ ತಂದು ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈರ್ವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ಕೊಣನೂರಿನ ನಿವಾಸಿ ಸ್ವಾಮಿ ಎಂಬಾತನಿಂದ ಮಾಂಸ ಖರೀದಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ, ಪಟ್ಟಣದ ನಿವಾಸಿ ದೀಪಕ್ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು, ಆತನಿಂದ 3 ಕೆ.ಜಿ. ಮಾಂಸವನ್ನು ವಶಕ್ಕೆ ಪಡೆದು, ಈರ್ವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.