ಮಡಿಕೇರಿ, ಮೇ 11: ನಗರದ ವಿವಿಧೆಡೆ ವಸತಿ ಗೃಹಗಳಲ್ಲಿ ಆರಂಭಗೊಂಡಿರುವ ಕ್ವಾರಂಟೈನ್ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಇಂದು ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲೆಗೆ ಆಗಮಿಸುವ ವ್ಯಕ್ತಿಗಳಿಗಾಗಿ ಹಾಸ್ಟೆಲ್ ಹಾಗೂ ಖಾಸಗಿ ವಸತಿ ಗೃಹಗಳಲ್ಲಿ ಕ್ವಾರಂಟೈನ್‍ಗೆ ಒಳಪಡಬೇಕಾಗಿದ್ದು, ವಸತಿ ಗೃಹಗಳಲ್ಲಿ ತಂಗುವವರು ಸರಕಾರ ನಿಗದಿ ಪಡಿಸಿರುವ ಬಾಡಿಗೆ ಹಣವನ್ನು ಪಾವತಿಸಬೇಕಿದೆ. ಅವರುಗಳಿಗೆ ಅಲ್ಲಿಯೇ ಊಟೋಪಚಾರ ವ್ಯವಸ್ಥೆ ಮಾಡಲಾಗಿದ್ದು, ಹೊಟೇಲ್ ಮಾಲೀಕರು ಹಾಗೂ ಅಲ್ಲಿನ ಸಿಬ್ಬಂದಿಗೆ ಒಟ್ಟು ವ್ಯವಸ್ಥೆಯ ಬಗ್ಗೆ ತರಬೇತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಸಂದರ್ಭ ಡಿವೈಎಸ್‍ಪಿ ದಿನೇಶ್ ಕುಮಾರ್, ತಹಶೀಲ್ದಾರ್ ಮಹೇಶ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶುಭಾ, ಡಿ.ಹೆಚ್.ಓ. ಡಾ. ಮೋಹನ್, ವಿಪತ್ತು ನಿರ್ವಹಣೆ ಸಂಸ್ಥೆಯ ಮುಖ್ಯಸ್ಥೆ ಅನನ್ಯ ಮತ್ತಿತರರು ಪಾಲ್ಗೊಂಡಿದ್ದರು.