ಕೂಡಿಗೆ, ಮೇ 11: ಕೂಡಿಗೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕೋಳಿ ಅಂಗಡಿ ತೆರೆಯುವ ವಿಷÀಯವಾಗಿ ತುರ್ತು ಸಭೆಯನ್ನು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿತ್ತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆದು ಕೂಡಿಗೆಯಲ್ಲಿ ಕೋಳಿ ಮಾಂಸದ ಅಂಗಡಿ ತೆರೆಯುವ ವಿಚಾರದಲ್ಲಿ ಸದಸ್ಯರುಗಳ ನಡುವೆ ಮಾತು ನಡೆದು ನಂತರ ಹಳೆಯ ನಿಯಮಗಳನ್ನು ಸಡಿಲಗೊಳಿಸಿ ಎರಡು ಅಂಗಡಿ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಲು ತೀರ್ಮಾನಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಸೇರಿದಂತೆ ಸದಸ್ಯರುಗಳಾದ ಕೆ.ಜೆ. ಮೋಹಿನಿ, ಪುಷÀ್ಪ, ರತ್ಮಮ, ಕೆ.ವೈ. ರವಿ, ಹೆಚ್.ಎಸ್. ರವಿ, ಕೃಷ್ಣ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿ ಶಿಲ್ಪಾ, ಕಂದಾಯ ವಸೂಲಿಗಾರ ಅನಿಲ್ ಮತ್ತಿತರು ಇದ್ದರು.