ಸೋಮವಾರಪೇಟೆ, ಮೇ 11: ಕೊರೊನಾ ವೈರಸ್ ಹರಡುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರನ್ನು ತೋಳೂರುಶೆಟ್ಟಳ್ಳಿ ಗ್ರಾಮದ ಶಿಕ್ಷಕ ಚಾವಾಡಿಮನೆ ಶಿವಕುಮಾರ್ ಹಾಗೂ ಸಹೋದರರು ಸನ್ಮಾನಿಸಿ, ಪ್ರೋತ್ಸಾಹ ತುಂಬಿದರು.

ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೊರೊನಾ ವಾರಿಯರ್ಸ್ ಸಭೆಯಲ್ಲಿ ಗ್ರಾಮದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರನ್ನು ಸನ್ಮಾನಿಸಿ ಮಾತನಾಡಿದ ಶಿವಕುಮಾರ್, ಕೊರೊನಾ ಆತಂಕದ ಸಮಯದಲ್ಲಿ ಧೈರ್ಯದಿಂದ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆಯರ ಶ್ರಮ ಶ್ಲಾಘನೀಯ. ಅವರುಗಳ ಸೇವೆಯಿಂದ ನಾವುಗಳು ಭಯವಿಲ್ಲದೇ ಜೀವನ ಸಾಗಿಸುತ್ತಿದ್ದೇವೆ ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷ ಪ್ರದೀಪ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ, ಸದಸ್ಯರುಗಳು, ಚಾವಾಡಿಮನೆ ಮಾಚಯ್ಯ, ಕರಿಯಪ್ಪ, ಚಂದ್ರಮ್ಮ, ಪ್ರಜ್ಞಾ ಅವರುಗಳು ಇದ್ದರು.