ವೀರಾಜಪೇಟೆ, ಮೇ 11: ವೀರಾಜಪೇಟೆಗೆ ಸಮೀಪದ ಎರಡನೇ ರುದ್ರಗುಪ್ಪೆ ಎಂಬಲ್ಲಿ ಮೂಡಗದ್ದೆ ರಾಮಕೃಷ್ಣ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಪೊನ್ನಂಪೇಟೆಯ ಸ್ನೇಕ್ ಭಾವೆ ಹಾಗೂ ಅರುಣ್ ಸೆರೆ ಹಿಡಿದು ಅಪರಾಹ್ನ ಕೊಡಗು ಕೇರಳ ಗಡಿ ಪ್ರದೇಶದ ಮಾಕುಟ್ಟ ಅರಣ್ಯಕ್ಕೆ ಬಿಟ್ಟಿದ್ದಾರೆ.

ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಕಾರ್ಮಿಕರು ತೋಟದ ಕೆಲಸದಲ್ಲಿ ನಿರತರಾಗಿದ್ದಾಗ ಪೊದೆಯೊಳಗಿನಿಂದ ಬುಸುಗುಟ್ಟುತ್ತಾ ಬಂದ ಕಾಳಿಂಗ ಸರ್ಪ ಕಾರ್ಮಿಕರುಗಳಲ್ಲಿ ಭಯದ ವಾತಾವರಣವನ್ನು ಉಂಟು ಮಾಡಿತ್ತು.

ಸುಮಾರು ಹನ್ನೆರಡು ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಗೋಣಿಚೀಲದೊಳಗೆ ಹಾಕಿ ರಸ್ತೆಯ ಬದಿಗೆ ಬಂದು ಚೀಲವನ್ನು ಬಿಚ್ಚಿದಾಗ ಈ ಸರ್ಪವು ತಾನು ನುಂಗಿದ್ದ ಕೇರೆ ಹಾವನ್ನು ಹೊರಗಡೆಗೆ ಕಕ್ಕಿತ್ತು. ಕೇರೆ ಹಾವು ಹೊಟ್ಟೆಯೊಳಗೆ ಸಾವನ್ನಪ್ಪಿತ್ತು.