ಸೋಮವಾರಪೇಟೆ, ಮೇ 9: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನವಾಗಿ ತೆರೆಯಲಾಗಿರುವ, ಕೊರೊನಾ ಸೋಂಕು ಪರೀಕ್ಷೆಗಾಗಿ ಗಂಟಲು ದ್ರವ ತೆಗೆಯುವ ಘಟಕವನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಉದ್ಘಾಟಿಸಿದರು.
ಈಗಾಗಲೇ ಆಸ್ಪತ್ರೆಯಲ್ಲಿ ಕೋವಿಡ್-ಕೇರ್ ಸೆಂಟರ್, ಪ್ರತ್ಯೇಕ ವಾರ್ಡ್‍ಗಳನ್ನು ಸ್ಥಾಪಿಸಲಾಗಿದ್ದು, ಇದೀಗ ಕೊರೊನಾ ಸೋಂಕು ಪತ್ತೆ ಹಚ್ಚಲು ಪ್ರಾಥಮಿಕವಾಗಿ ಅಗತ್ಯವಿದ್ದ ಗಂಟಲು ದ್ರವ ತೆಗೆಯುವ ಘಟಕಕ್ಕೆ ಶಾಸಕರು ಚಾಲನೆ ನೀಡಿದರು. ಕೊರೊನಾ ವೈರಸ್ ಬಗ್ಗೆ ಕೊಡಗಿನ ಜನತೆ ಹೆಚ್ಚು ಜಾಗರೂಕರಾಗಿರಬೇಕು. ಜಿಲ್ಲಾಡಳಿತದ ಮೂಲಕ ಹಲವಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಜನತೆ ಸಹಕಾರ ನೀಡಬೇಕು ಎಂದು ಶಾಸಕರು ಹೇಳಿದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಆಸ್ಪತ್ರೆಯ ವೈದ್ಯಾಧಿಕಾರಿ ಶಿವಪ್ರಸಾದ್, ವೈದ್ಯರುಗಳಾದ ಸತೀಶ್‍ಕುಮಾರ್, ಸಚಿನ್, ಅಫ್ರೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.