ಮಡಿಕೇರಿ, ಮೇ 10: ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಯ ಬಿ. ಶೆಟ್ಟಿಗೇರಿಯಲ್ಲಿ ನಿನ್ನೆ ನಡೆದ ರಾಜು ಎಂಬವರ ಹತ್ಯೆ ಪ್ರಕರಣವನ್ನು 24 ಗಂಟೆಯ ಅವಧಿಯೊಳಗೆ ಅಲ್ಲಿನ ಪೊಲೀಸರು ಭೇಧಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿತ್ರದಲ್ಲಿ ಬಂಧಿತ ಆರೋಪಿಗಳಾದ ರವಿ ಹಾಗೂ ವಿನೋದ್ ಅವರೊಂದಿಗೆ ಕಾರ್ಯಾಚರಣೆ ನಡೆಸಿರುವ ವೃತ್ತ ನಿರೀಕ್ಷಕ ರಾಮರೆಡ್ಡಿ, ಠಾಣಾಧಿಕಾರಿ ಸುರೇಶ್ ಬೋಪಣ್ಣ, ಎಎಸ್‍ಐಗಳಾದ ಮೇದಪ್ಪ, ಗಣಪತಿ, ಸಿಬ್ಬಂದಿಗಳಾದ ಕೃಷ್ಣಪ್ಪ, ಕೃಷ್ಣಮೂರ್ತಿ, ಮಣಿಕಂಠ, ಮಜೀದ್, ಪೂವಣ್ಣ ಅವರುಗಳಿದ್ದಾರೆ.