ಕೂಡಿಗೆ, ಮೇ 9: ಕೂಡುಮಂಗಳೂರು ಗ್ರಾಮ ವ್ಯಾಪ್ತಿಯ ಬಸವತ್ತೂರು ಗ್ರಾಮದಲ್ಲಿರುವ ಆನೆಕೆರೆಯ ಹೂಳು ಎತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆನೆಕೆರೆಯು ಇತಿಹಾಸ ಇರುವ ಕೆರೆ ಎಂದು ಹೆಸರು ಪಡೆದಿದೆ ಈ ಕೆರೆ ಹೂಳು ಎತ್ತುವ ಬಗ್ಗೆ ಗ್ರಾಮ ಸಭೆಯಲ್ಲಿ ತೀರ್ಮಾನವಾಗಿರುವಂತೆ ಹೂಳು ಎತ್ತುವಂತೆ ನಿರ್ಧರಿಸಲಾಗಿತ್ತು.
ಅದರಂತೆ ಗ್ರಾಮ ಪಂಚಾಯತಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಕಾಮಗಾರಿ ನೆಡೆಯುತ್ತಿದೆ. ಈ ಕೆರೆಯ ಹೂಳನ್ನು ಸಮೀಪದ ರೈತರು ತಮ್ಮ ತಮ್ಮ ಜಮೀನಿಗೆ ಹಾಕಿಸಿಕೊಳ್ಳುತ್ತಿದ್ದಾರೆ. ಹೂಳು ತೆಗೆಯುವುದರಿಂದ ಈ ಭಾಗದಲ್ಲಿ ನೀರು ಹೆಚ್ಚು ಸಂಗ್ರಹವಾಗುವುದರಿಂದ. ಸುತ್ತಮುತ್ತಲಿನ ರೈತರ ಕೊಳವೆಗೆ ಬಾವಿಯ ಅಂತರ್ ಜಲ ಹೆಚ್ಚಾಗುತ್ತದೆ.
ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನೇಕ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಪ್ರಮುಖವಾಗಿ ರೈತರಿಗೆ ಅನುಕೂಲ ವಾಗುವ ರೈತರ ಕಣ, ಶಾಲಾಕಾಲೇಜುಗಳ ಬೇಲಿ ನಿರ್ಮಾಣ ಅಂಗನವಾಡಿ ಕೇಂದ್ರಗಳ ತಡೆಗೋಡೆ, ಆಸ್ಪತ್ರೆ ಆವರಣದಲ್ಲಿ ಗಿಡ ನೆಡುವಿಕೆ ಸೇರಿದಂತೆ ಯೋಜನೆಯ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆಯಿಷಾ ತಿಳಿಸಿದ್ದಾರೆ.