ವೀರಾಜಪೇಟೆ, ಮೇ. 9: ಕೊರೊನಾ ವೈರಸ್ ಲಾಕ್‍ಡೌನ್ ನಿರ್ಬಂಧದ ಸಡಿಲಿಕೆಯಲ್ಲೂ ಖಾಸಗಿ ಬಸ್ಸುಗಳು ಸಂಚರಿಸದರಿಂದ ಇಲ್ಲಿನ ಖಾಸಗಿ ಬಸ್ಸು ನಿಲ್ದಾಣವನ್ನು ವಾಹನಗಳ ಪಾರ್ಕಿಂಗ್ ಸ್ಥಳವಾಗಿ ತಾತ್ಕಾಲಿಕವಾಗಿ ಮಾರ್ಪಡಿಸಲಾಗಿದೆ.

ವೀರಾಜಪೇಟೆಯ ಗಡಿಯಾರ ಕಂಬದಿಂದ ದೊಡ್ಡಟ್ಟಿ ಚೌಕಿ ರಸ್ತೆವರೆಗೆ ವಾಹನ ದಟ್ಟಣೆಯನ್ನು ನಿಯಂತ್ರಿಸಲು ದ್ವಿಮುಖ ಸಂಚಾರವಾಗಿ ಪರಿವರ್ತಿಸಲಾಗಿದೆ.