ಸುಂಟಿಕೊಪ್ಪ, ಮೇ 10: ಸುಂಟಿಕೊಪ್ಪ ಸಂತೆ ಮಾರುಕಟ್ಟೆಯಲ್ಲಿ ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಸಂತೆ ವ್ಯಾಪಾರ ಬಿರುಸಿನಿಂದ ನಡೆಯಿತು.
ಕಳೆದ ವಾರ ಗ್ರಾ.ಪಂ. ಆಡಳಿತ ಮಂಡಳಿ ವತಿಯಿಂದ ಕೊರೋನಾ ಮುನ್ನೆಚ್ಚರಿಕಾ ಕ್ರಮವಾಗಿ ಸಂತೆ ವ್ಯಾಪಾರವನ್ನು ಸೋಮವಾರ ಶಾಲಾ ಮೈದಾನದಲ್ಲಿ ನಡೆಸಲು ಅನುವು ಮಾಡಿಕೊಡಲಾಗಿತ್ತು. ಕೆಲ ಜನಪ್ರತಿನಿಧಿಗಳು ಸ್ಥಳೀಯರು ಸಂತೆ ಮಾರಾಟಕ್ಕೆ ಅನುವು ಮಾಡಿಕೊಟ್ಟಿ ರುವುದನ್ನು ವ್ಯಾಪಾಕವಾಗಿ ವಿರೋಧಿಸಿ ದ್ದರು. ಇದರಿಂದ ಗ್ರಾ.ಪಂ.ಯವರು ಮಾಮೂಲಿಯಂತೆ ಸಂತೆ ಮಾರುಕಟ್ಟೆ ಯಲ್ಲಿ ಎಂದಿನಂತೆ ಅವಕಾಶ ನೀಡಿದರು. 40 ವ್ಯಾಪಾರಸ್ಥರಿಗೆ ಪರವಾನಿ ನೀಡಿದ್ದರು. ಇದರಿಂದ ದಿನಸಿ ತರಕಾರಿ ವ್ಯಾಪಾರ ಭರ್ಜರಿ ಯಾಗಿ ನಡೆಯಿತು. ಕೋಳಿ ಕುರಿ ವ್ಯಾಪಾರ ಮತ್ತು ಬಾರುಗಳಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿದ್ದು, ಕಳೆದ ಒಂದೂವರೆ ತಿಂಗಳಿನಿಂದ ಮುಚ್ಚಿದ ಬಾರುಗಳಲ್ಲಿ ಗ್ರಾಹಕರು ಮಾಸ್ಕ್ ಧರಿಸಿಕೊಂಡು ಅಂತರ ಕಾಯ್ದು ಕೊಂಡು ಮದ್ಯ ಖರೀದಿಸಿದರು.