ಕೊಡ್ಲಿಪೇಟೆ: ಕೊಡ್ಲಿಪೇಟೆ ಹಾಗೂ ಶನಿವಾರಸಂತೆ ವ್ಯಾಪ್ತಿಯ ಕುಟುಂಬಗಳಿಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನದಡಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಿದರು.

ತಾಲೂಕಿನ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯ 5 ಹಾಗೂ ಬೆಸೂರು ಗ್ರಾಮ ಪಂಚಾಯಿತಿಯ 34 ಕುಟುಂಬಗಳಿಗೆ ಅಗತ್ಯ ಕಿಟ್‍ಗಳನ್ನು ವಿತರಿಸಲಾಯಿತು. ಇದರೊಂದಿಗೆ ಶನಿವಾರಸಂತೆ ವ್ಯಾಪ್ತಿಯ ಆಲೂರು-ಸಿದ್ದಾಪುರ ಗ್ರಾ.ಪಂ.ನ 68 ಹಾಗೂ ನಿಡ್ತ ಗ್ರಾ.ಪಂ.ನ 26 ಕುಟುಂಬಗಳಿಗೆ ಶಾಸಕರು ಆಹಾರ ಸಾಮಗ್ರಿಯನ್ನು ವಿತರಿಸಿದರು.

ಈಗಾಗಲೇ ಪ್ರಥಮ ಹಂತದಲ್ಲಿ ತಾಲೂಕಿನ 6 ಹೋಬಳಿ ವ್ಯಾಪ್ತಿಯಲ್ಲಿ 1943 ಕಿಟ್‍ಗಳನ್ನು ವಿತರಿಸಲಾಗಿದ್ದು, 2ನೇ ಹಂತದಲ್ಲಿ 2846 ಕಿಟ್‍ಗಳನ್ನು ವಿತರಿಸಲಾಗಿದೆ. ಈಗಾಗಲೇ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ನ್ಯಾಯಬೆಲೆ ಅಂಗಡಿಯ ಮೂಲಕ 2 ತಿಂಗಳ ಆಹಾರ ಅಕ್ಕಿ, ಗೋಧಿಯನ್ನು ವಿತರಿಸಲಾಗಿದೆ.

ಈ ಸಂದರ್ಭ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ, ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.*ಗೋಣಿಕೊಪ್ಪಲು: ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಮಜ್ಜಿಗೆಹಳ್ಳ ಹಾಡಿಯ ನಿವಾಸಿಗಳಿಗೆ ದಿನಸಿ ಪದಾರ್ಥಗಳನ್ನು ನೈಋತ್ಯ ರೈಲ್ವೆ ವಲಯ, ಮೈಸೂರು ವಿಭಾಗದ ಮುಖ್ಯ ಟಿಕೆಟ್ ಇನ್ಸ್‍ಪೆಕ್ಟರ್ ಸಿಂಗೂರ ಸುಬ್ರಮಣಿ ಮತ್ತು ಅವರ ಪತ್ನಿ ಮಾನ್ವಿ ವಿತರಿಸಿದರು.

ಸುಮಾರು 60 ಕುಟುಂಬಗಳಿಗೆ 1000 ರೂಪಾಯಿಗೂ ಅಧಿಕ ಬೆಲೆಬಾಳುವ ಅಕ್ಕಿ, ಬೇಳೆ, ಸಕ್ಕರೆ, ಬೆಲ್ಲ, ಗೋಧಿ, ಧವಸಧಾನ್ಯಗಳು ಮತ್ತು ಮಸಾಲೆ ಪದಾರ್ಥಗಳನ್ನು ನೀಡುವ ಮೂಲಕ ಕೂಲಿ ಕೆಲಸವಿಲ್ಲದೆ ಆರ್ಥಿಕವಾಗಿ ಕಂಗೆಟ್ಟಿರುವ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ಕೆ ಮುಂದಾದರು.

ಸೇವೆ ಸಲ್ಲಿಸಿದ್ದು ನಮಗೆ ಮನೋತೃಪ್ತಿ ಒದಗಿದೆ ಎಂದು ದಂಪತಿಗಳಾದ ಸಿಂಗೂರ ಸುಬ್ರಮಣಿ ಹಾಗೂ ಮಾನ್ವಿ ತಮ್ಮ ಸೇವೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ಗೋಣಿಕೊಪ್ಪಲು ಗ್ರಾ.ಪಂ. ಸದಸ್ಯ ಸುರೇಶ್ ರೈ, ತಿತಿಮತಿ ಗ್ರಾ.ಪಂ. ಸದಸ್ಯೆ ಶಾಂತಮ್ಮ, ಜಿಲ್ಲಾ ಜಾಂಭವ ಯುವ ಸೇನೆ ಅಧ್ಯಕ್ಷ ಸತೀಶ್ ಸಿಂಗಿ, ಪ್ರಮುಖರಾದ ದೀಪು ಮತ್ತು ದಿವ್ಯ ಹಾಜರಿದ್ದರು.ಸುಂಟಿಕೊಪ್ಪ: ಎಸ್‍ಡಿಪಿಐ ವತಿಯಿಂದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಪೌರಕಾರ್ಮಿಕರಿಗೆ ದಿನಸಿ ಮತ್ತು ತರಕಾರಿ ಸಾಮಗ್ರಿಗಳ ಕಿಟ್‍ಅನ್ನು ವಿತರಿಸಲಾಯಿತು.

ಎಸ್‍ಡಿಪಿಐನ ಕಚೇರಿಯಲ್ಲಿ ಆಯೋಜಿಸಲಾದ ಸರಳ ಸಮಾರಂಭದಲ್ಲಿ ಪಟ್ಟಣದ ಸ್ವಚ್ಛತೆಯನ್ನು ಕಾಯುತ್ತಿರುವ ಪಂಚಾಯಿತಿ ಸ್ವಚ್ಛತಾಗಾರರ ಸೇವೆಯನ್ನು ಸ್ಮರಿಸಿ ಅವರಿಗೆ ದಿನಸಿ ಮತ್ತು ಆಹಾರ ಕಿಟ್‍ಗಳನ್ನು ಪಂಚಾಯಿತಿ ಸದಸ್ಯೆ ನಾಗರತ್ನ ಸುರೇಶ್ ಹಾಗೂ ಎಸ್‍ಡಿಪಿಐ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅವರು ಪಂಚಾಯಿತಿ ಸ್ವಚ್ಛತಾಗಾರರಿಗೆ ಕಿಟ್‍ಗಳನ್ನು ವಿತರಿಸಿದರು.

ಈ ಸಂದರ್ಭ ಎಸ್‍ಡಿಪಿಐನ ನಗರಾಧ್ಯಕ್ಷ ಬಾಶೀತ್, ಖಜಾಂಚಿ ಕೆ.ಎ. ಲತೀಫ್, ಅಬ್ಬಾಸ್ ಹಾಗೂ ಜುಬ್ಬೇರ್ ಇದ್ದರು.ಶ್ರೀಮಂಗಲ: ಟಿ. ಶೆಟ್ಟಿಗೇರಿ ಗ್ರಾ.ಪಂ.ನಿಂದ ಪರಿಶಿಷ್ಟ ಪಂಗಡದ ಪಡಿತರ ಚೀಟಿ ಹೊಂದಿಲ್ಲದ 251 ಫಲಾನುಭವಿಗಳಿಗೆ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್ ಮತ್ತು ಪಿ.ಡಿ.ಓ. ಕವಿತ ಆಹಾರ ಧಾನ್ಯದ ಕಿಟ್‍ಗಳನ್ನು ವಿತರಿಸಿದರು.

ಕಿಟ್‍ನಲ್ಲಿ 10 ಕೆ.ಜಿ. ಅಕ್ಕಿ, 1 ಕೆ.ಜಿ. ಸಕ್ಕರೆ, 1 ಕೆ.ಜಿ. ಬೇಳೆ, 1 ಕೆ.ಜಿ. ಉಪ್ಪು ಮತ್ತು 1 ಲೀ. ಅಡುಗೆ ಎಣ್ಣೆಯನ್ನು ಒಳಗೊಂಡಿದೆ. ಜಿಲ್ಲಾಡಳಿತದಿಂದ ಪರಿಶಿಷ್ಟ ಜಾತಿ - ಪಂಗಡದ ಕಲ್ಯಾಣ ಇಲಾಖೆಯಿಂದ ನೀಡಿದ ಕಿಟ್‍ಗಳನ್ನು ಗ್ರಾ.ಪಂ. ನಿಂದ ಫಲಾನುಭವಿಗಳನ್ನು ಆಯ್ಕೆ ಮಾಡಿ ವಿತರಿಸಲಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್ ತಿಳಿಸಿದರು.ನಾಪೋಕ್ಲು: ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ನಾಪೋಕ್ಲು ಬಾಪೂಜಿ ವಠಾರದÀ ಪರಿಶಿಷ್ಟ ಜಾತಿಯ ಎಲ್ಲಾ ಬಡ ಕುಟುಂಬಗಳಿಗೆ ಉದ್ಯಮಿಗಳಾದ ಕಾರ್ತಿಕ್ ಸುಬ್ಬಯ್ಯ ಹಾಗೂ ಮಮತಾ ಸುಬ್ಬಯ್ಯ ನೆರವಿನಿಂದ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ನಾಪೋಕ್ಲು ಗ್ರಾ.ಪಂ ಅಧ್ಯಕ್ಷ ಇಸ್ಮಾಯಿಲ್, ಉಪಾಧ್ಯಕ್ಷ ಸಾಬ ತಿಮ್ಮಯ್ಯ, ಸದಸ್ಯ ರೋಶನ್, ಹಿರಿಯರಾದ ಹರೀಶ್ ಅವರು ಬಡ ಕುಟುಂಬಗಳಿಗೆ ದಿನಸಿ ಹಂಚಿಕೆ ಮಾಡಿದರು.