ಕುಶಾಲನಗರ, ಮೇ 9: ಕೇರಳ ಗಡಿಭಾಗದ 100 ಕ್ಕೂ ಅಧಿಕ ಪ್ರಯಾಣಿಕರು ಕುಶಾಲನಗರ ತಪಾಸಣಾ ಕೇಂದ್ರ ಮೂಲಕ ತೆರಳುತ್ತಿದ್ದ ಸಂದರ್ಭ ಮಾಹಿತಿ ತಿಳಿದ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅಧಿಕಾರಿಗಳೊಂದಿಗೆ ಸಮರ್ಪಕ ದಾಖಲೆ ಪಡೆಯುವಂತೆ ಸೂಚಿಸಿದ ಘಟನೆ ನಡೆದಿದೆ. ಮೈಸೂರಿನಿಂದ ಅಧಿಕೃತ ಅನುಮತಿ ಪಡೆದು ಗೇಟ್ ಮೂಲಕ ತೆರಳುತ್ತಿದ್ದ ವಿದ್ಯಾರ್ಥಿಗಳು ಕೇರಳದ ಕಾಸರಗೋಡು ಮಂಜೇಶ್ವರಕ್ಕೆ ತೆರಳಬೇಕಿತ್ತು. ಅವರನ್ನು ಹಿಂತಿರುಗಿ ಕಳುಹಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಹೆಚ್ಚಿನ ದಾಖಲೆ ಪಡೆದ ಅಧಿಕಾರಿಗಳು ಬಸ್‍ಗಳನ್ನು ಕೊಡಗು ಜಿಲ್ಲೆ ಮೂಲಕ ತೆರಳಲು ಅನುಮತಿ ನೀಡಿದರು.
ಪೆÇಲೀಸ್ ಪಾಸ್ ಜೊತೆಗೆ ಹೊರ ರಾಜ್ಯದ ವಾಹನಗಳ ಪಾಸ್‍ಗಳನ್ನು ಹಾಜರುಪಡಿಸಿದ ಬಳಿಕ ಬಸ್ಸುಗಳಲ್ಲಿದ್ದ ನೂರಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಮುಂದಿನ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಯಿತು.
ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದರಾಜ್, ಡಿವೈಎಸ್ಪಿ ಎಚ್.ಎಂ.ಶೈಲೇಂದ್ರ, ಕಂದಾಯ ನಿರೀಕ್ಷಕ ಮಧುಸೂದನ್ ಹಾಗೂ ಆರೋಗ್ಯ ಇಲಾಖೆ ವೈದ್ಯರು ಇದ್ದರು.