ಶನಿವಾರಸಂತೆ, ಮೇ 9: ಗೌಡಳ್ಳಿ ಗ್ರಾ.ಪಂ.ಯ ಎಳನೀರು ಗುಂಡಿ ರಸ್ತೆಯಲ್ಲಿ ತಾ. 8 ರಂದು ರಾತ್ರಿ ಕಾರೊಂದು (ಕೆಎ 12 ಎಂಎ 6743) ದನಕ್ಕೆ ಡಿಕ್ಕಿಯಾಗಿದೆ. ಕಾರು ಚರಂಡಿಗೆ ಬಿದ್ದು ಕಾರಿನೊಳಗಿದ್ದ ಕಾರಿನ ಮಾಲೀಕನ ಮುಖಕ್ಕೆ ಗಾಯವಾಗಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡ ಕುರಿತು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡ್ಲಿಪೇಟೆ ಹೋಬಳಿ ದೊಡ್ಡ ಬಂಡಾರ ಗ್ರಾಮದ ಡಿ.ಆರ್. ವಿಶ್ವನಾಥ ಅವರ ಬಾಫ್ತ ಕಾರನ್ನು ಚಾಲಕ ಮಧುಕುಮಾರನು ಚಾಲನೆ ಮಾಡಿಕೊಂಡು ಹಿರಿಕರ ಗ್ರಾಮಕ್ಕೆ ಹೋಗುತ್ತಿರುವಾಗ ಎಳನೀರು ಗುಂಡಿ ಗ್ರಾಮದ ಹತ್ತಿರ ಕಾರು ಎದುರಿಗೆ ಬಂದ ದನವನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ದನಕ್ಕೆ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ವಿಶ್ವನಾಥ ಅವರ ಮುಖಕ್ಕೆ ತರಚಿದ ಗಾಯವಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.