*ಗೋಣಿಕೊಪ್ಪಲು, ಮೇ 9: ಪ್ರಧಾನಮಂತ್ರಿ ಉಜ್ವಲ್ ಗ್ಯಾಸ್ ಯೋಜನೆಯ ಫಲಾನುಭವಿಗಳಿಗೆ ತಿತಿಮತಿ ವಿನಾಯಕ ಇಂಡೇನ್ ಗ್ಯಾಸ್ ಏಜೆನ್ಸಿ ಮೂಲಕ ವಿತರಿಸಲಾಯಿತು. ತಿತಿಮತಿ ಪಂಚಾಯಿತಿ ವ್ಯಾಪ್ತಿಯ ನೊಖ್ಯ ಗ್ರಾಮದ ಗಿರಿಜನ ಕುಟುಂಬಗಳಿಗೆ ಗ್ಯಾಸ್ ಹಾಗೂ ಗ್ಯಾಸ್ ಬಳಕೆಯ ಸಲಕರಣೆಗಳನ್ನು ನೀಡಿದರು. ಪರಿಸರ ಸಂರಕ್ಷಣೆಗೆ ಗ್ಯಾಸ್ ಬಳಕೆ ಬಹು ಮುಖ್ಯವಾಗಿದೆ.
ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಮೋದಿಯವರು ಬಿಪಿಎಲ್ ಪಡಿತರಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ಕಲ್ಪಿಸಲು ಮುಂದಾಗಿದ್ದಾರೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಗ್ಯಾಸ್ ಏಜೆನ್ಸಿ ಮಾಲೀಕರಾದ ಮಮತಾ ಗಣೇಶ್ ತಿಳಿಸಿದರು.