ಕೂಡಿಗೆ, ಮೇ 8 : ಕೂಡಿಗೆ ಗ್ರಾಮ ಪಂಚಾಯಿತಿಯ ಮದಾಲಪುರ ವ್ಯಾಪ್ತಿಯಲ್ಲಿ ಬ್ಯಾಡಗೊಟ್ಟ ಗ್ರಾಮದ ಮೂಲಕ ಹರಿಯುತ್ತಿರುವ ಹಾರಂಗಿ ಮುಖ್ಯ ನಾಲೆಯ ದಡದ ಮನೆ ನಿರ್ಮಾಣಕ್ಕೆ ನಿವೇಶನ ನೀಡಲು ಮುಂದಾದ ಕ್ರಮಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ನೀರಾವರಿ ಇಲಾಖೆಯ ವತಿಯಿಂದ ಪೆÇಲೀಸ್ ಠಾಣೆಗೆ ದೂರು ನೀಡಲಾಗಿದೆ.
ಮದಾಲಪುರದ ನಿವೇಶನ ರಹಿತರಿಗೆ ಕೂಡಿಗೆ ಗ್ರಾಮ ಪಂಚಾಯಿತಿಯ ಕೆಲ ಸದಸ್ಯರು ಹಾರಂಗಿ ಮುಖ್ಯ ನಾಲೆಯ ಪ್ರದೇಶದಲ್ಲಿ ನಿವೇಶನ ನೀಡಲು ಮುಂದಾದ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಜೇಗೌಡ ಕಾರ್ಯಪಾಲಕ ಇಂಜಿನಿಯರ್ ಮದನ್ ಕುಮಾರ್ ಹಾರಂಗಿ ಇಂಜಿನಿಯರ್ ನಾಗರಾಜ್, ಕಿರಣ ಮೊದಲಾದವರು ಸ್ಧಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿ ಈ ಜಾಗದಲ್ಲಿ ಯಾವುದೇ ಕೆಲಸ ನಡೆಯಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣೆಗೆ ದೂರು ನೀಡಲಾಗಿದೆ
ಈ ಬಗ್ಗೆ ಪ್ರತಿಕ್ರಿಯಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ ಪಿ. ಅಪ್ಪಚ್ಚು ರಂಜನ್, ನೀರಾವರಿ ಇಲಾಖೆಯ ಜಾಗವನ್ನು ಮನೆ ನಿವೇಶನ ಮಾಡುವುದು ಸರಿಯಾದ ಕ್ರಮವಲ್ಲ, ಅಲ್ಲದೆ ಈಗಾಗಲೇ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬ್ಯಾಡಗೊಟ್ಟದಲ್ಲಿ ನಿವೇಶನಕ್ಕೆ ಜಾಗವನ್ನು ಕಂದಾಯ ಇಲಾಖೆಯ ಮೂಲಕ ನೀಡಲಾಗಿದೆ. ಅತಿಕ್ರಮಣ ಮಾಡುವವರ ವಿರೋಧ ಪೆÇಲೀಸ್ ಠಾಣೆಗೆ ದೂರು ನೀಡಲು ಇಲಾಖೆಯವರಿಗೆ ಸೂಚನೆ ನೀಡಲಾಗಿದೆ ಎಂದರು.